ಮಡಿಕೇರಿ ಜ.9 : ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ನೂರ್ಕೊಲ್ ನಾಡ್ ಒತ್ತೊರ್ಮೆ ಕೂಟ ಸಂಭ್ರಮದಿಂದ ನಡೆಯಿತು. ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮನ್ನು ಸಮಾಜದ ಪದಾಧಿಕಾರಿಗಳು ದೀಪ ಬೇಳಗಿಸುವ ಮೂಲಕ ಉದ್ಘಾಟಿಸಿದರು. ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೋಮಾಲೆ ಪೊಮ್ಮಕ್ಕಡ ಕೂಟದ ಉಮ್ಮತಾಟ್, ನೃತ್ಯ ಹಾಗೂ ಪುರುಷರ ಬೊಳಕಾಟ್, ಪರೆಯಕಳಿ ಪ್ರದರ್ಶನ, ಕೊಡವ ಹಾಡು, ವಿವಿಧ ಮನೊರಂಜನಾ ಕ್ರೀಡೆಗಳು ಗಮನ ಸೆಳೆಯಿತು. ಮಕ್ಕಳಿಗೆ ಕೊಡವ ಆಟ್‍ಪಾಟ್ ತರಬೇತಿ ನೀಡಲಾಯಿತು. ವಿಶೇಷವಾಗಿ ಎಲೆ ಊಟದ ವ್ಯವಸ್ಥೆ ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭ : ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಧ್ಯಕ್ಷರಾದ ಮುಳ್ಳಂಡ ರತ್ತು ಚಂಗಪ್ಪ ಮಾತನಾಡಿ, ನೂತನವಾಗಿ ಪ್ರಾರಂಭಗೊಂಡ ಚೆಟ್ಟಳ್ಳಿ ಕೊಡವ ಸಮಾಜ ಎಲ್ಲರ ಸಹಕಾರದಿಂದ ಇಂದು ಉತ್ತಮ ಕಾರ್ಯವನ್ನು ಮಾಡಲು ಸಹಕಾರಿಯಾಗಿದೆ. ಸಮಾಜಕ್ಕೊಂದು ಸ್ವಂತ ಕಟ್ಟಡ ಇದ್ದಾಗ ಮಾತ್ರ ಶಾಶ್ವತನೆಲೆ ಯಾಗಲಿದೆ ಎಂದರು.
ಸಮಾಜದ ನಿರ್ದೇಶಕ ಬಿದ್ದಂಡ ಮಾದಯ್ಯ, ಐಚೆಟ್ಟಿರ ಚೋಂದಮ್ಮ, ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭ ಚಂಗಪ್ಪ, ನಿರ್ದೇಶಕರಾದ ಐಚೆಟ್ಟಿರ ಮಾಚಯ್ಯ, ಪುತ್ತರಿರ ಗಂಗು ಅಚ್ಚಯ್ಯ, ಬಟ್ಟೀರ ರಕ್ಷು ಕಾಳಪ್ಪ, ಪುತ್ತರಿರ ಕಾಶಿ ಸುಬ್ಬಯ್ಯ, ಕಡೇಮಡ ವಿನ್ಸಿ ಅಪ್ಪಯ್ಯ, ಕೇಚೆಟ್ಟೀರ ರತಿ ಕಾರ್ಯಪ್ಪ, ಪಳಂಗಂಡ ಕಾಳಪ್ಪ ಹಾಗೂ ಸಂಘದ ಸದಸ್ಯರು ಹಾಜರಿದ್ದರು. ಮುಳ್ಳಂಡ ಮಾಯಮ್ಮ ತಮ್ಮಯ್ಯ ಪ್ರಾರ್ಥಿಸಿ, ಮುಳ್ಳಂಡ ರತ್ತು ಚಂಗಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ನಿರೂಪಿಸಿದರು. ಉಪಾಧ್ಯಕ್ಷೆ ಐಚೆಟ್ಟಿರ ಸುನಿತ ಮಾಚಯ್ಯ ವಂದಿಸಿದರು.


















