ಮಡಿಕೇರಿ ಜ.25 : ಮತದಾನ ಭಾರತೀಯ ಪ್ರಜೆಯ ಸಂವಿಧಾನಿಕ ಹಕ್ಕು, ನಮ್ಮ ಒಂದು ಪ್ರಜ್ಞಾವಂತ ಮತದಿಂದ ಇಡೀ ದೇಶದ ಭವಿಷ್ಯವನ್ನು ಬದಲಿಸುವ ಶಕ್ತಿ ಇದೆ. ಹಣದ ಆಮಿಷಗಳಿಗೆ ಬಲಿಯಾಗದೆ ಅಥವಾ ಮತದಾನವನ್ನು ಬಹಿಷ್ಕರಿಸದೆ ವಿದ್ಯಾವಂತ ಯುವಕರು ಇಂದು ಅಭಿವೃದ್ಧಿಗೆ ತನ್ನ ಮತವನ್ನು ನೀಡುತ್ತಾ ದೇಶದ ಸರ್ವತೋಮುಖ ಬದಲಾವಣೆಗೆ ಸಹಕರಿಸಬೇಕಾಗಿದೆ ಎಂದು ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾಸಂಸ್ಥೆ ಪ್ರಾಶುಪಾಲರಾದ ಗೀತಾ ನಾಯ್ಡು ಹೇಳಿದರು.
ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಪೂರ್ಣ ಮತದಾನಕ್ಕೆ ಕರೆ ನೀಡಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು .
ಕಾರ್ಯಕ್ರಮದ ಮುಖ್ಯ ಭಾಗವಾಗಿ ರಾಜಕೀಯ ಪಕ್ಷಗಳ ಮತಯಾಚನೆ , ಪ್ರಜೆಯು ಮತದಾನದ ಸಂದರ್ಭ ಎಸಗುವ ಸಾಮಾನ್ಯ ತಪ್ಪುಗಳು , ಕಡ್ಡಾಯ ನಿಯಮಗಳು , ಮತದಾರಣಾ ಪ್ರಕ್ರಿಯೆಗಳನ್ನು ಒಳಗೊಂಡ ಅಣಕು ಮತದಾನ ಪ್ರಕ್ರಿಯೆಯನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನೀಲಂ, ಸ್ಮಿಷಿತ , ಲೀಲಾವತಿ , ದಿವ್ಯ , ಸಬಿಯ , ಚಂದ್ರಿಕಾ, ಕುಶ ಮತ್ತು ವಿದ್ಯಾರ್ಥಿ ವೃಂದ ಭಾಗವಹಿಸಿದ್ದರು.