ಸೋಮವಾರಪೇಟೆ ಏ.1 : ಶಿವಕುಮಾರ ಸ್ವಾಮೀಜಿಯವರ 116ನೆ ಜಯಂತಿ ಅಂಗವಾಗಿ ಸೋಮವಾರಪೇಟೆ ಬಿ.ಟಿ.ಸಿ.ಜಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಯಿತು.
ಶಿವಕುಮಾರ ಜಯಂತೋತ್ಸವ ಸಮಿತಿ, ಕಾಲೇಜು, ಇತಿಹಾಸ ಸಂಘ, ರೆಡ್ಡ್ ಕ್ರಾಸ್ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಕಾಲೇಜು ಆವರಣದಲ್ಲಿ ತಾಲೂಕು ಆಸ್ಪತ್ರೆ ವತಿಯಿಂದ ರಕ್ತದ ಗುಂಪು, ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯಿತು.
ವೈದ್ಯಾಧಿಕಾರಿ ಡಾ.ಶಿವಪ್ರಸಾದ್ ವಿದ್ಯಾರ್ಥಿಗಳೊಂದಿಗೆ ಆಪ್ತಸಮಾಲೋಚನೆ ನಡೆಸಿ ವೈದ್ಯಕೀಯ ಸಲಹೆ ನೀಡಿದರು.
ಈ ಸಂದರ್ಭ ಶಿವಕುಮಾರ ಸ್ವಾಮೀಜಿ ಜಯಂತೋತ್ಸವ ಸಮಿತಿ ಅಧ್ಯಕ್ಷ ಎಸ್.ಮಹೇಶ್, ಪದಾಧಿಕಾರಿಗಳಾದ ಜಯಣ್ಣ, ಶಿವಣ್ಣ, ಪ್ರಾಂಶುಪಾಲರಾದ ಜಯಲಕ್ಷ್ಮಿ, ರೆಡ್ಕ್ರಾಸ್ ವಿಭಾಗದ ಮುಖ್ಯಸ್ಥರಾದ ಪಾವನಿ, ವೈದ್ಯೆ ಡಾ.ಕೃತಿಕಾ, ಆಸ್ಪತ್ರೆಯ ಸಿಬ್ಬಂದಿಗಳಾದ ವಸಂತಿ, ಸುನಿಲ್ , ಭವ್ಯ ಹಾಗೂ ಮುಂತಾದವರು ಹಾಜರಿದ್ದರು.








