ಮಡಿಕೇರಿ ಏ.18 : ಕಗ್ಗೋಡ್ಲು-ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ ಶಾಲಾ ಬ್ಯಾಗ್ ಕೊಡುಗೆ ನೀಡಲಾಯಿತು.
ಕಗ್ಗೋಡ್ಲುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 35 ವಿದ್ಯಾಥಿ೯ಗಳಿಗೆ ಕಲಿಕೆಯನ್ನು ಮುಂದುವರಿಸಲು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗೆ ಸಂತೋಷದಿಂದ ಹಾಜರಾಗಲು ಉತ್ತೇಜಿಸಿ ಶಾಲಾ ಬ್ಯಾಗ್ ಹಾಗೂ ಲೇಖನಿ ಸಾಮಾಗ್ರಿಗಳನ್ನು ಉಡುಗೆಯಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕ್ಲಬ್‌ನ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್ ,ಕಾರ್ಯದರ್ಶಿ ಲಲಿತಾ ರಾಘವನ್ , ಸದಸ್ಯರುಗಳಾದ ಉಮಾಗೌರಿ ,ಮಲ್ಲಿಗೆ ಪೈ ಹಾಗೂ ಆಗ್ನೇಸ್ ಮುತ್ತಣ್ಣ, ಶಾಲಾ ಮುಖ್ಯಶಿಕ್ಷಕಿ ಜಲಜಾಕ್ಷಿ ಶಿಕ್ಷಕಿ ಇಂದಿರಾ ಹಾಜರಿದ್ದರು.