ಕುಶಾಲನಗರ ಮೇ 17 : ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿವೃತ್ತ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆಯು ಕುಶಾಲನಗರದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಸಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭ ಮಾತನಾಡಿದ, ಸಿದ್ದಪ್ಪ ನಿವೃತ್ತ ನೌಕರರ ಶ್ರೇಯೋಭಿವೃದ್ಧಿಯೇ ಸಂಘದ ಉದ್ದೇಶವಾಗಿದೆ. ನಿವೃತ್ತ ನೌಕರರ ಸಂಘವು ವರ್ಷಪೂರ್ತಿ ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಜಿಲ್ಲೆಗೆ ಮಾದರಿ ಸಂಘವಾಗಿದೆ.ಸಂಘದ ಎಲ್ಲ ಚಟುವಟಿಕೆಗಳು ಪಾರದರ್ಶಕವಾಗಿದ್ದು, ಪದಾಧಿಕಾರಿಗಳು ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಸಂಘದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಎಲ್ಲ ನಿವೃತ್ತ ನೌಕರರು ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಬಿ.ಸಿ.ರಾಜು ಮಾತನಾಡಿ,
ಸಮಾಜಕ್ಕೆ ಹಾಗೂ ಯುವಜನತೆಗೆ ಸೂಕ್ತ ಮಾರ್ಗದರ್ಶನ ನೀಡುವುದರ ಜತೆಗೆ ತಮ್ಮ ಅನುಭವಗಳನ್ನು ಸಮಾಜದ ಅಭಿವೃದ್ಧಿಗಾಗಿ ಬಳಸಬೇಕಾಗಿದೆ ಎಂದರು.
ಸಂಘದ ಕಾರ್ಯದರ್ಶಿ ಯು.ಟಿ.ರಾಮಯ್ಯ ವರದಿ ವಾಚಿಸಿ ಜಮಾ ಖರ್ಚು ಮಂಡಿಸಿದರು.
ಈ ಸಂದರ್ಭ ಸಂಘದ ಖಜಾಂಜಿ ನಿಂಗರಾಜು, ರಾಮಚಂದ್ರಪ್ಪ,ಎಚ್.ಆರ್.ಪುಟ್ಟಸ್ವಾ ಮಿ, ವಿರಾಜಪೇಟೆ ದಲಿತ ಮುಖಂಡ ವೀರಭದ್ರಪ್ಪ,ಜಯಪ್ಪಹಾನಗಲ್ಲು,ಶಿ ರಂಗಾಲದ ಬೇಲಯ್ಯ,ಗೋಪಾಲ್, ಚನ್ನಕೇಶವ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.