ಮಡಿಕೇರಿ ಜು.17 : ನಗರದ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸುಮಾರು 30ಕ್ಕೂ ಹೆಚ್ಚು ವಿಜ್ಞಾನ ವರ್ಕಿಂಗ್ ಮಾಡೆಲ್‍ಗಳ ಪ್ರದರ್ಶನ ಗಮನ ಸೆಳೆಯಿತು.
ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ಸುಮಂತ್ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ಎ.ಜಾನ್ಸನ್, ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಸುಮಿತ್ರ ಹಾಗೂ ಆಡಳಿತ ಮಂಡಳಿ ವ್ಯವಸ್ಥಾಪಕ ರವಿ ಹಾಜರಿದ್ದರು.
ತೀರ್ಪುಗಾರರಾಗಿ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಪಲ್ಲವಿ, ಸಂತ ಜೋಸೆಫರ ಕಾಲೇಜಿನ ಉಪನ್ಯಾಸಕರಾದ ಎಂ.ಸಿ. ಚೈತ್ರ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಉಪನ್ಯಾಸಕರಾದ ಬಿ.ವಿ.ವೀಕ್ಷಿತ ಪಾಲ್ಗೊಂಡಿದ್ದರು.
ವಿದ್ಯಾರ್ಥಿ ಮಾರ್ಗದಶಕರು, ಉಪನ್ಯಾಸಕರಾದ ಟಿ.ಡಿ.ಗಾನವಿ, ಶ್ವೇತ ರುಮಾಲೆ, ಸಿ.ಸಿ.ಶ್ವೇತಾ, ಮನಿಷ ಮೊರಾಸ್ ಸಹಕಾರದೊಂದಿಗೆ ವಿದ್ಯಾರ್ಥಿಗಳು ತ್ರೀಡಿ ಪ್ರಿಂಟರ್, ಡಿ.ಸಿ.ಸ್ಮಾರ್ಟ್‍ಬಿನ್, ಎ.ಸಿ.ಕನ್‍ವರ್ಟರ್, ಟಿಸ್ಲ ಕಾಯಿಲ್, ರೆಕಾರ್ಡ್, ವಿವಿಧ ನೆನ್ಸರ್‍ಗಳು ಜಿಡ್ರೋ ಇಲೆಕ್ಟ್ರಿಸಿಟಿ, ಅರ್ತ್‍ಕ್ವೇಕ್ ಡಿಟೆಕ್ಟರ್, ಮೆಟಲ್ ಡಿಟೆಕ್ಟರ್, ಆ್ಯಂಟಿ ಸ್ಲೀಪ್, ಅಲಾರ್ಮ್‍ಗಳು, ವೀಟ್‍ಸ್ಟನ್ಸ್ ಬ್ರಿಡ್ಜ್, ಕ್ಲಪ್ ಸ್ವಿಚ್, ಲೇಸರ್ ಸೆಕ್ಯುರಿಟಿ ಅಲಾವರ್ಗ್, ಕೃತಕ ಮೋಟಗಳ ಸೃಷ್ಟಿ, ಫ್ಯಾರಡೆ ಕೇಚ್, ಎಗ್‍ಇನ್‍ಕ್ಯುಬೇಟರ್, ಹೈಡ್ರಾಲಿಕ್ ಬ್ರಿಡ್ಜ್, ಹೈಡ್ರಾಲಿಕ್ ಕಾರ್ ಪಾರ್ಕಿಂಗ್, ಅಬ್ಸ್‍ಟೆಕಲ್, ಡಿಟೆಕ್ಟಿಂಗ್ ಜಕಾರ್, ಲೇಸರ್ ಸಂಬಂಧಿತ ಮಾದರಿಗಳನ್ನು ಪ್ರದರ್ಶಿಸಿದರು.
ಜಿಲ್ಲೆಯ ವಿವಿಧ ಕಾಲೇಜಿನ ಪ್ರಾಂಶುಪಾಲರು ಸಂತ ಮೈಕಲರ ಕಾಲೇಜಿಗೆ ಭೇಟಿ ನೀಡಿ ವಿಜ್ಞಾನ ವರ್ಕಿಂಗ್ ಮಾಡೆಲ್‍ಗಳ ಪ್ರದರ್ಶನವನ್ನು ವೀಕ್ಷಿಸಿದರು.
ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ಪಿ.ಡಿ.ಗಾನವಿ ಸ್ವಾಗತಿಸಿ, ಸರ್ವರನ್ನು ವಂದಿಸಿದರು.
ವಿದ್ಯಾರ್ಥಿಗಳಲ್ಲಿ ಕಲ್ಪನಾಶಕ್ತಿ, ಸಂಶೋಧನಾಶಕ್ತಿ, ಪ್ರೇರಣಾಶಕ್ತಿಯನ್ನು ಉತ್ತೇಜಿಸುವುದು ಆಗಿದೆ. ಈ ಕಾರ್ಯಕ್ರಮವು ಅನ್ವೇಷಣಾ ಪ್ರವೃತ್ತಿಯನ್ನು ತಾಂತ್ರಿಕ ಪ್ರತಿಭೆಯನ್ನು ಬೆಳೆಸುವುದರೊಂದಿಗೆ ಸಮಾಜಕ್ಕೆ ರಾಷ್ಟ್ರಕ್ಕೆ ಹೊಸ ವಿಜ್ಞಾನಿಗಳನ್ನು ನೀಡುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಉಪನ್ಯಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.