ಸೋಮವಾರಪೇಟೆ ಜು.19 : ತಾಲ್ಲೂಕು ಆಡಳಿತ ಮತ್ತು ಕಂದಾಯ ಇಲಾಖೆಯ ವತಿಯಿಂದ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ, ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಪಂಚಾಯಿತಿ ವ್ಯಾಪ್ತಿಯ ಕಂದಾಯ ಗ್ರಾಮಗಳಾದ ಗರ್ವಾಲೆ, ಸೂರ್ಲಬ್ಬಿ, ಶಿರಂಗಳ್ಳಿ ಹಾಗೂ ಉಪ ಗ್ರಾಮಗಳಾದ ಕುಂಬಾರಗಡಿಗೆ, ಕಿರುದಾಲೆ, ಮಂಕ್ಯ ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ತಮ್ಮ ಆಸ್ತಿಗಳ ಪೌತಿ ಖಾತೆಗೆ ಸಂಬಂಧಿಸಿದಂತೆ, ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಅರ್ಜಿ ಸಲ್ಲಿಸಿದರು.
ಈ ಸಂದರ್ಭ ಗರ್ವಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜುಂಡ, ಸದಸ್ಯೆ ಎಚ್.ಎಚ್. ರತ್ನ, ಗ್ರಾಮ ಲೆಕ್ಕಿಗರಾದ ದೀಪಿಕ ಮತ್ತು ಚೈತ್ರ ಇದ್ದರು.








