ಮಡಿಕೇರಿ ಆ.8 : ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ 2019 – 20ನೇ ಸಾಲಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಯೋಜನೆಯಡಿ ಬರುವ ಪ್ರೌಢಶಾಲೆಯ ಹೆಚ್ಚುವರಿ ಕೊಠಡಿಗಳನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.
ನಂತರ ಶಾಲೆಯ ಅಭಿವೃದ್ಧಿ ಕಾರ್ಯಗಳು, ಮೂಲಭೂತ ಸೌಕರ್ಯಗಳ ಬಗ್ಗೆ ಶಾಲೆಯ ಆಡಳಿತ ಮಂಡಳಿಯವರೊಂದಿಗೆ ಮಾಹಿತಿ ಪಡೆದುಕೊದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಎನ್‍ಎಸ್‍ಎಸ್ ವಿದ್ಯಾರ್ಥಿ ಘಟಕದ ವತಿಯಿಂದ ಗಿಡಗಳನ್ನು ನೆಡಲಾಯಿತು..
ಈ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್, ಶಾಲೆಯ ಮುಖ್ಯೋಪಾಧ್ಯಾಯರಾದ ಟಿ.ಜಿ ಪ್ರೇಮಕುಮಾರ್, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಪುಟ್ಟಸ್ವಾಮಿ, ಜಿ.ಪಂ ಅಭ್ಯಂತರ ವೀರೇಂದ್ರ, ಕಟ್ಟಡದ ಗುತ್ತಿಗೆದಾರಡಿ.ಸಿ ಪ್ರಕಾಶ್, ಜಿ.ಪಂ ಮಾಜಿ ಸದಸ್ಯ ವಿ.ಪಿ ಶಶಿಧರ್, ಕೆ.ಪಿ.ಚಂದ್ರಕಲಾ, ಸ್ಥಳೀಯ ಪ್ರಮುಖರಾದ ಕೆ.ಕೆ ಮಂಜುನಾಥ್, ನಟೇಶ್ ಗೌಡ, ಪ್ರಮೋದ್ ಮುತ್ತಪ್ಪ, ಶೇಕ್ ಕಲೀಮುಲ್ಲ ಹಾಗೂ ಗ್ರಾಮಸ್ಥರು ಪ್ರಮುಖರು ಹಾಜರಿದ್ದರು.