ಮಡಿಕೇರಿ ಅ.17 : ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ನಡೆದ 58ನೇ ಘಟಿಕೋತ್ಸವದಲ್ಲಿ ಮಡಿಕೇರಿಯ ಸುಜನ್.ಪಿ “ಫಿಲ್ಮ್ ಮೇಕಿಂಗ್” ವಿಭಾಗದಲ್ಲಿ ಪಿಜಿ (ಪೋಸ್ಟ್ ಗ್ರಾಜುವೇಶನ್) ಚಿನ್ನದ ಪದಕ ಪಡೆದಿದ್ದಾರೆ.
ಇವರು ನಗರದ ರಾಜೇಶ್ವರಿ ಶಾಲೆಯಲ್ಲಿ ಪ್ರಾಥಮಿಕ, ಸಂತ ಮೈಕಲರ ಶಾಲೆಯಲ್ಲಿ ಪ್ರೌಢ, ಮೂರ್ನಾಡು ಎಜುಕೇಷನ್ ಟ್ರಸ್ಟ್ ನಲ್ಲಿ ಪಿಯುಸಿ ಶಿಕ್ಷಣ ಮತ್ತು ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜ್ ನಲ್ಲಿ ಪದವಿ ಪಡೆದಿದ್ದಾರೆ.
ಸುಜನ್.ಪಿ ನಗರದ ಕುಂಬಳಗೇರಿ ಉಕ್ಕಡದ ನಿವಾಸಿ, ಎಲ್‌ಐಸಿ ಪ್ರತಿನಿಧಿ ಹೆಚ್.ಎಸ್.ಪ್ರೇಮ್ ಕುಮಾರ್ ಹಾಗೂ ದಿ.ಶೀಲಮ್ಮ ಅವರ ಪುತ್ರ.










