ಮಡಿಕೇರಿ ಅ.18 : ಮಡಿಕೇರಿ ದಸರಾ ಸಾಂಸ್ಕೃತಿಕ ಕಾಯ೯ಕ್ರಮಗಳ ನಾಲ್ಕನೇ ದಿನವಾದ ಅ.19 ರಂದು ರಂದು ಜಾನಪದ ದಸರ ಪ್ರಯುಕ್ತ ವೈವಿಧ್ಯಮಯ ಕಾಯ೯ಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸಂಜೆ 6.30 ಗಂಟೆಯಿಂದ ಆಯೋಜಿಸಲ್ಪಟ್ಟಿದೆ.
ಕುಶಾಲನಗದ ಶಾರದಾ ಕಲಾತಂಡದಿಂದ ಜಾನಪದ ವೈವಿಧ್ಯ, ಮಡಿಕೇರಿಯ ಡಾನ್ಸ್ ಲ್ಯಾಬ್ ತಂಡದಿಂದ ನೖತ್ಯ ವೈವಿಧ್ಯ,, ವಿರಾಜಪೇಟೆಯ ಪ್ರೇಮಾಂಜಲಿ ನಾಟ್ಯ ಮಯೂರಿ ಸಂಸ್ಥೆಯಿಂದ ನೖತ್ಯ ವೈವಿಧ್ಯ, ಮಡಿಕೇರಿಯ ನಾಟ್ಯ ಕಲಾ ಡಾನ್ಸ್ ಸ್ಟುಡಿಯೋದಿಂದ ನೖತ್ಯ, ಮಡಿಕೇರಿಯ ಪೊಮ್ಮಕ್ಕಡ ಕೂಟದಿಂದ ನೖತ್ಯ, ಮಡಿಕೇರಿಯ ಸ್ಪಂದನ ಮಹಿಳಾ ಸಂಘದಿಂದ ನೖತ್ಯ, ಕೆ.ಪಿ.ಎಸ್.ಬೀಟ್ಸ್ ಕೊಡಗು ಜಿಲ್ಲಾ ಪತ್ರಕತ೯ರ ಸಂಘ(ರಿ) ತಂಡದಿಂದ ಸಂಗೀತ ರಸಮಂಜರಿ ಸೇರಿದಂತೆ ಅನೇಕ ಕಾಯ೯ಕ್ರಮಗಳು ಆಯೋಜಿಸಲ್ಪಟ್ಟಿದೆ.
ಬೆಳಗ್ಗೆ 9.30 ಗಂಟೆಯಿಂದ ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ ಜಾನಪದ ಕಲಾಜಾಥಾ ನಡೆಯಲಿದ್ದು, ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೂ ವೈವಿಧ್ಯಮಯ ಜಾನಪದ ನೖತ್ಯ, ಗಾಯನ ಕಾಯ೯ಕ್ರಮಗಳು ಆಯೋಜಿಸಲ್ಪಟ್ಟಿದೆ ಎಂದು ಜಾನಪದ ದಸರಾ ಸಂಚಾಲಕ ಅನಿಲ್ ಎಚ್.ಟಿ. ತಿಳಿಸಿದ್ದಾರೆ.