ಸೋಮವಾರಪೇಟೆ ಅ.18 : ಗೋ ಸಂರಕ್ಷಣಾ ರಥಯಾತ್ರೆ ಇಂದು ಸೋಮವಾರಪೇಟೆ ಪಟ್ಟಣಕ್ಕೆ ಆಗಮಿಸಿತು.
ಶ್ರೀ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಹಾಗೂ ಗೋ ಸೇವಾ ಗತಿವಿಧಿ ಕರ್ನಾಟಕ ನೇತೃತ್ವದಲ್ಲಿ ನ.14 ರಿಂದ 24 ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುದು ಗ್ರಾಮದಲ್ಲಿ ನಡೆಯಲಿರುವ ಅಷ್ಟೋತ್ತರ ಶ್ರೀಮದ್ ಭಾಗವತ ಸಪ್ತಾಹ ಮತ್ತು 1108 ನಾರಾಯಣ ಕವಚದ ಮಹಾಯಜ್ಞಾದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸಲಿರುವ ಗೋ ಸಂರಕ್ಷಣಾ ರಥ ಇಂದು ಸೋಮವಾರಪೇಟೆಗೆ ಪ್ರವೇಶಿಸಿತು.
ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ದೊಡ್ಡಬಳ್ಳಾಪುರ ಮಠದ ಶ್ರೀ ನಿಶ್ಚಲ ದೇಶಿಕೇಂದ್ರ ಸ್ವಾಮೀಜಿ ಗೋವಿಗೆ ಪೂಜೆ ಸಲ್ಲಿ ಸುವುದರೊಂದಿಗೆ, ಅಕ್ಕಿ ಬೆಲ್ಲ ತಿನ್ನಿಸಿ ಆಶೀರ್ವದಿಸಿದರು.
ಈ ಸಂದರ್ಭ ವೀರಶೈವ ಸಮಾಜದ ಪ್ರಮುಖರಾದ ಶಿವಕುಮಾರ್, ಜಯಣ್ಣ, ನಾಗರಾಜ್, ರಾಜಣ್ಣ, ಯೋಗೇಶ್, ಕಲಾಗಿರೀಶ್, ಮಂಜುಳಾ ಬಸವರಾಜ್, ಉಮಾರುದ್ರ ಪ್ರಸಾದ್ ಹಾಗೂ ಮತ್ತಿತರರು ಹಾಜರಿದ್ದರು.