ಮಡಿಕೇರಿ ಅ.22 : ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಪಾದಯಾತ್ರೆಯ 4ನೇ ಹಂತ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗಾಮದ ಬೋಟೋಳಿನಾಡ್ ನಲ್ಲಿ ಪೂರ್ಣಗೊಂಡಿತು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಕೋವಿಯೊಂದಿಗೆ ಪಾದಯಾತ್ರೆ ನಡೆಸಿದ ಗ್ರಾಮದ ಕೊಡವ, ಕೊಡವತಿಯರು ಕೊಡವಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆ ಪರ ಘೋಷಣೆಗಳನ್ನು ಕೂಗಿದರು.
ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಬೋಟೋಳಿನಾಡ್ “ತಿರಿಕೆ ಪಾಳಿ ಮಂದ್” ನಲ್ಲಿ ಕೊಡವ ಜನಜಾಗೃತಿ ಸಭೆ ನಡೆಸಿದ ನಾಚಪ್ಪ ಅವರು, ಅತ್ಯಂತ ಸೂಕ್ಷö್ಮ ಜನಾಂಗವಾಗಿರುವ ಕೊಡವರಿಗೆ ಸಾಂವಿಧಾನಿಕ ಭದ್ರತೆ ಸಿಗಬೇಕಾದರೆ ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯ ಬೇಡಿಕೆ ಈಡೇರಬೇಕೆಂದು ಪ್ರತಿಪಾದಿಸಿದರು.
ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು, ಕೊಡವ ಜನಾಂಗದ ಸಮಗ್ರ ಕುಲಶಾಸ್ತç ಅಧ್ಯಯನ ಆರಂಭಿಸಬೇಕು, ಕೊಡವ ಕಸ್ಟಮರಿ ಜನಾಂಗೀಯ ‘ಸಂಸ್ಕಾರ ಗನ್’ ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ನಮ್ಮ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಕೊಡವರ “ಧಾರ್ಮಿಕ ಸಂಸ್ಕಾರ”ವೆಂದು ರಕ್ಷಿಸಬೇಕು, ಮಾತೃ ಭಾಷೆ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್‌ಗೆ ಸೇರಿಸಬೇಕು. ಸಂವಿಧಾನದ 347, 350, 350ಎ ಮತ್ತು 350ಬಿ ವಿಧಿಗಳ ಅಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ಕ್ ಅನ್ನು ಪರಿಚಯಿಸಬೇಕು. ಕೊಡವ ತಕ್ಕ್ ಅನ್ನು ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಪರಿಗಣಿಸಬೇಕು, ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ವಿಶ್ವ ಕೊಡವಾಲಜಿ (ಕೊಡವ ಶಾಸ್ತçದ ಜಾಗತಿಕ ಸಂಶೋಧನಾ ಅಧ್ಯಯನ ಕೇಂದ್ರ) ಸಂಶೋಧನಾ ಕೇಂದ್ರ ಮತ್ತು ಕೊಡವ ಸುಧಾರಿತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಸರ್ಕಾರವು ನಮಗೆ ಭೂಮಿಯನ್ನು ನೀಡಬೇಕು. ಜೀವನದಿ ಕಾವೇರಿಗೆ “ಕಾನೂನು ವ್ಯಕ್ತಿ ಸ್ಥಿತಿಯೊಂದಿಗೆ ಜೀವಂತ ಘಟಕವನ್ನು ಸ್ಥಾಪಿಸಬೇಕು ಸೇರಿದಂತೆ ಒಂಭತ್ತು ಪ್ರಮುಖಗಳ ಬೇಡಿಕೆಗಳ ಬಗ್ಗೆ ನಾಚಪ್ಪ ವಿವರಿಸಿದರು.
::: 5ನೇ ಹಂತದ ಪಾದಯಾತ್ರೆ :::
ಐದನೇ ಹಂತದ ಪಾದಯಾತ್ರೆ ನ.7 ರಂದು ಬೆಳಗ್ಗೆ 10 ಗಂಟೆಗೆ ಬೆಪುö್ಪನಾಡ್’ ನ ಅರಮೇರಿ ಮಂದ್, ಮಧ್ಯಾಹ್ನ 2.30 ಗಂಟೆಗೆ ಕಡಂಗ ಮುರೂರು ಮಂದ್ (ವಿರಾಜಪೇಟೆ ತಾಲ್ಲೂಕು), ನ.8ರಂದು ಬೆಳಗ್ಗೆ 10 ಗಂಟೆಗೆ ಕಡಿಯತ್‌ನಾಡ್ ನ ಕರಡದ “ಬೇಲಿಯಾಣೆ ಮಂದ್”, ಮಧ್ಯಾಹ್ನ 2.30 ಗಂಟೆಗೆ ಬಲಂಬೇರಿ ಮಂದ್ ಮತ್ತು ನ.9 ರಂದು ಬೆಳಗ್ಗೆ 10 ಗಂಟೆಗೆ ನೂರಂಬಡನಾಡ್ ಮಂದ್, ಸಂಜೆ 4.30 ಗಂಟೆಗೆ ನೆಲಜಿನಾಡ್ ಮಂದ್ (ನೆಲಜಿ) (ಮಡಿಕೇರಿ ತಾಲ್ಲೂಕು) ನಲ್ಲಿ ನಡೆಯಲಿದೆ.
ನ.10 ರಂದು ಬೆಳಗ್ಗೆ 9 ಗಂಟೆಗೆ ಯಾತ್ರೆಯು ಪಾಡಿನಾಡ್- ಪಾಡಿ ಇಗ್ಗುತ್ತಪ್ಪ ದೇವ ಸನ್ನಿಧಿ ತಲುಪಿ, ಮಧ್ಯಾಹ್ನ 12 ಗಂಟೆಗೆ ಮಡಿಕೇರಿ ತಾಲ್ಲೂಕಿನ ಕುಂಜಿಲ- ಕಕ್ಕಬ್ಬೆ “ಕೆಂಜರಾಣೆ ಪಾಡಿನಾಡ್‌ಮಂದ್’ನಲ್ಲಿ ಸಮಾರೋಪಗೊಳ್ಳಲಿದೆ ಎಂದು ನಾಚಪ್ಪ ಮಾಹಿತಿ ನೀಡಿದರು.
ಬೋಟೋಳಿನಾಡ್ ನಲ್ಲಿ ನಡೆದ ಪಾದಯಾತ್ರೆ ಹಾಗೂ ಜಾಗೃತಿ ಸಭೆಯಲ್ಲಿ ಪಟ್ಟಡ ಮೀನ್ ದೇವಯ್ಯ, ಪಟ್ಟಡ ದೇವಯ್ಯ, ಅಮ್ಮಣಕುಟ್ಟಂಡ ಕಟ್ಟಿ, ಬೊಳ್ಳೆಪಂಡ ಮೇದಪ್ಪ, ಅಚ್ಚಪಂಡ ಮುತ್ತಣ್ಣ, ಕರ್ತಚಿರ ರಾಯ್, ಚಂಬಂಡ ಜನತ್, ಕಾಂಡೇರ ಸುರೇಶ್, ಕಂಬಂಡ ದೇವಯ್ಯ, ಕಂಬಂಡ ಭೀಮಯ್ಯ, ನಾಯಕಂಡ ವಿಜಯ, ಕಬ್ಬಚ್ಚಿರ ಬೋಪಣ್ಣ, ಪಟ್ಟಡ ವಿಠಲ್, ಪಟ್ಟಡ ಮನು, ಪಟ್ಟಡ ಬೋಪಣ್ಣ, ಪಟ್ಟಡ ಕಾರ್ಯಪ್ಪ, ಪಟ್ಟಡ ಸತೀಶ್, ಪಟ್ಟಡ ಸಂತೋಷ, ಪಟ್ಟಡ ಚೆಂಗಪ್ಪ, ಕಬ್ಬಚ್ಚಿರ ಬೋಪಣ್ಣ, ಕೀತಿಯಂಡ ಅಯ್ಯಣ್ಣ, ಪೋರೆರ ಮಾದಪ್ಪ, ಕರ್ತಾಚಿರ ಚರ್ಮಣ್ಣ, ಅಮ್ಮಣಕುಟ್ಟಂಡ ಭರತ್, ಅಮ್ಮಣಕುಟ್ಟಂಡ ಗಣೇಶ್, ಅಮ್ಮಣಕುಟ್ಟಂಡ ಅಚ್ಚಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭ ಗ್ರಾಮದ ಹಿರಿಯರು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.











