ಮಡಿಕೇರಿ ಅ.22 : ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್ ಮತ್ತು ಬೋಡೋಲ್ಯಾಂಡ್ ಮಾದರಿಯಲ್ಲಿ ಸಂವಿಧಾನದ ಆರ್ಟಿಕಲ್ 244 ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.
ಕೊಡವ ಲ್ಯಾಂಡ್ ಗಾಗಿ ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಬಿಟ್ಟಂಗಾಲ ಜಂಕ್ಷನ್ ಬಳಿಯಿಂದ ಪಾದಯಾತ್ರೆ ನಡೆಯಿತು. ನಂತರ ಪಟ್ಟಿಬಾಣೆ ಮಂದ್ ಪೆರವನಾಡ್ ನಲ್ಲಿ ಕೊಡವ ಜಾಗೃತಿ ಸಭೆ ನಡೆಸಿದ ನಾಚಪ್ಪ ಅವರು, ಕೊಡವರ ಸಾಂವಿಧಾನಿಕ ಭದ್ರತೆಗಾಗಿ 9 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸುತ್ತಿದ್ದು, ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದರು.
ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು ಎನ್ನುವುದು ಮುಖ್ಯ ಬೇಡಿಕೆಯಾಗಿದ್ದು, ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಹೈಕೋರ್ಟ್ನಲ್ಲಿ ಈ ಕುರಿತು ಅರ್ಜಿ ಸಲ್ಲಿಸಿ ನಮ್ಮ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಹಿರಿಯರಾದ ಸ್ವಾಮಿ ಅವರು ನಮಗೆ ಸ್ಫೂರ್ತಿಯಾಗಿದ್ದು, ಅವರಿಂದ ಪ್ರೇರಣೆಗೊಂಡು ಅವರ ಜನ್ಮದಿನದಿಂದ ಪಾದಯಾತ್ರೆಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು, ಕೊಡವ ಜನಾಂಗದ ಸಮಗ್ರ ಕುಲಶಾಸ್ತç ಅಧ್ಯಯನ ಆರಂಭಿಸಬೇಕು, ಕೊಡವ ಕಸ್ಟಮರಿ ಜನಾಂಗೀಯ ‘ಸಂಸ್ಕಾರ ಗನ್’ ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ನಮ್ಮ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಕೊಡವರ “ಧಾರ್ಮಿಕ ಸಂಸ್ಕಾರ”ವೆಂದು ರಕ್ಷಿಸಬೇಕು, ಮಾತೃ ಭಾಷೆ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್‌ಗೆ ಸೇರಿಸಬೇಕು. ಸಂವಿಧಾನದ 347, 350, 350ಎ ಮತ್ತು 350ಬಿ ವಿಧಿಗಳ ಅಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ಕ್ ಅನ್ನು ಪರಿಚಯಿಸಬೇಕು. ಕೊಡವ ತಕ್ಕ್ ಅನ್ನು ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಪರಿಗಣಿಸಬೇಕು, ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ವಿಶ್ವ ಕೊಡವಾಲಜಿ (ಕೊಡವ ಶಾಸ್ತ್ರದ ಜಾಗತಿಕ ಸಂಶೋಧನಾ ಅಧ್ಯಯನ ಕೇಂದ್ರ) ಸಂಶೋಧನಾ ಕೇಂದ್ರ ಮತ್ತು ಕೊಡವ ಸುಧಾರಿತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಸರ್ಕಾರವು ನಮಗೆ ಭೂಮಿಯನ್ನು ನೀಡಬೇಕು. ಜೀವನದಿ ಕಾವೇರಿಗೆ “ಕಾನೂನು ವ್ಯಕ್ತಿ ಸ್ಥಿತಿಯೊಂದಿಗೆ ಜೀವಂತ ಘಟಕವನ್ನು ಸ್ಥಾಪಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಪೆರವನಾಡಿನ ಹಿರಿಯರಾದ ಮಾಚೇಟಿರ ಚೋಟು ಕಾವೇರಪ್ಪ, ಕಾಳೆಂಗಡ ರಮೇಶ್ ಕಾರ್ಯಪ್ಪ, ಚೇಂದಂಡ ವಸಂತ್, ಮಾಚೇಟಿರ ರಮೇಶ್, ಮಾಚೇಟಿರ ಸುನಿಲ್, ಚೇಂದಂಡ ಗೌರಿ ವಸಂತ್, ಚೇಂದಂಡ ಮೀನಾ ಸನ್ನಿ, ಚೇಂದಂಡ ಪೊನ್ನಮ್ಮ ಕಾವೇರಪ್ಪ, ಮಾಚೇಟಿರ ಲತಾ ಕಾವೇರಪ್ಪ, ಮಾಚೇಟಿರ ಚೋಂದಮ್ಮ, ಮಾಚೇಟಿರ ದೇವಕಿ ಅಪ್ಪಯ್ಯ, ಮಾಚೇಟಿರ ರುಕ್ಮಿಣಿ, ಮಾಚೇಟಿರ ನಿರ್ಮಲಾ ಕಾವೇರಪ್ಪ, ಗುಡ್ಡಂಡ ಸ್ವರ್ಣ ಪೂಣಚ್ಚ, ಗುಡ್ಡಂಡ ಪೊನ್ನು ಉತ್ತಪ್ಪ, ಗುಡ್ಡಂಡ ಪಟ್ಟು ನಾಣಯ್ಯ, ಪುಚ್ಚಿಮಂಡ ಪಾರ್ವತಿ ಮುತ್ತಪ್ಪ, ಪುಚ್ಚಿಮಂಡ ಲತಾ ಪ್ರಕಾಶ್, ಪುಚ್ಚಿಮಂಡ ರಾಧಾ ಕಾವೇರಪ್ಪ, ಪಡಿಯಂಡ ಲೀಲಾವತಿ ಕಾವೇರಪ್ಪ, ಪಡಿಯಂಡ ಭಾಗ್ಯ ಮುತ್ತಪ್ಪ, ಪಡಿಯಂಡ ಲೀಲಾ ಮಾದಪ್ಪ, ಕೆ.ಮುತ್ತಮ್ಮ ಕುಟ್ಟಪ್ಪ, ಕೆ.ದೇವಿಕಾ ಮಹೇಶ್, ಕಾಂಡೇರ ಸುರೇಶ್, ಚೇಂಬಂಡ ಜನತ್, ಕಾಳೆಂಗಡ ಕಾರ್ಯಪ್ಪ, ಮಾಚೇಟಿರ ಕಾವೇರಪ್ಪ, ಮಾಚೇಟಿರ ಸುನಿಲ್, ಮಾಚೇಟಿರ ಸಚಿನ್, ಚೇಂದಂಡ ಗಣೇಶ್, ಚೇಂದಂಡ ವಸಂತ, ಚೇಂದಂಡ ಗೌತಮ್, ಚೇಂದಂಡ ಶಿವಕುಮಾರ್, ಚೇಂದಂಡ ಕುಟ್ಟಪ್ಪ, ಚೇಂದಂಡ ಬೋಪುಣಿ, ಚೇಂದಂಡ ನಾಣಯ್ಯ, ಚೇಂದಂಡ ತಿಮ್ಮಯ್ಯ, ಚೇಂದಂಡ ಪೊನ್ನಣ್ಣ, ಪುಚ್ಚಿಮಾಡ ತಮ್ಮಯ್ಯ, ಪುಚ್ಚಿಮಾಡ ತಿಮ್ಮಯ್ಯ, ಪುಚ್ಚಿಮಾಡ ಲಿತೇಶ್, ಪುಚ್ಚಿಮಂಡ ಮುತ್ತಪ್ಪ, ಪುಚಿಮಂಡ ದಿಲ್ಲನ್ ದೇವಯ್ಯ, ಕುಂಬೇರ ಬಿದ್ದಪ್ಪ, ಮಾಚೇಟಿರ ಸುನಿಲ್ ಕುಟ್ಟಪ್ಪ, ಮಾಚೇಟಿರ ಕೃಪಾ ಚೆಂಗಪ್ಪ, ಅಂಚೇಟಿರ ಸೂರಜ್, ಮಾಚೇಟಿರ ಚಾಪಿ ಕುಶಾಲಪ್ಪ, ಮಾಚೇಟಿರ ರಮೇಶ್ ತಿಮ್ಮಯ್ಯ, ಮಾಚೇಟಿರ ಸನ್ನಿ ನಾಚಪ್ಪ, ಮಾಚೇಟಿರ ಮಾಲಾ ಬೋಸ್, ಮಾಚೇಟಿರ ಸಚಿನ್ ಮಂದಣ್ಣ, ಮಾಚೇಟಿರ ಬೋಸ್ ನಾಚಪ್ಪ, ಪಡಿಯಂಡ ಸಚಿನ್ ಸೋಮಯ್ಯ, ಗುಡ್ಡಂಡ ಕ್ರಿಶ್ ಕಾರ್ಯಪ್ಪ, ಗುಡ್ಡಂಡ ಲಿಯೋನ್ ಸೋಮಯ್ಯ, ಗುಡ್ಡಂಡ ಪೂಣಚ್ಚ ಮತ್ತಿತರರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಕೋವಿಯೊಂದಿಗೆ ಪಾದಯಾತ್ರೆ ಹಾಗೂ ಜಾಗೃತಿ ಸಭೆಯಲ್ಲಿ ಪಾಲ್ಗೊಂಡರು.











