NEWS DESK *ಕೊಡಗು ಜಿಲ್ಲಾ ಬಿಜೆಪಿಗೆ ನೂತನ ಪದಾಧಿಕಾರಿಗಳ ಆಯ್ಕೆ*
ಮಡಿಕೇರಿ ಫೆ.7 : ಕೊಡಗು ಜಿಲ್ಲಾ ಬಿಜೆಪಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರಧಾನ ಕಾರ್ಯದರ್ಶಿಗಳಾಗಿ ಮಹೇಶ್ ಜೈನಿ, ವಿ.ಕೆ.ಲೋಕೇಶ್, ಚಲನ್ ಕುಮಾರ್ ಹಾಗೂ ಮಹಿಳಾ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಅನಿತಾ ಪೂವಯ್ಯ ಅವರನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ.
ಜಿಲ್ಲಾ ವಕ್ತಾರರಾಗಿ ಬಿ.ಕೆ.ಅರುಣ್ ಕುಮಾರ್, ತಳೂರು ಕಿಶೋರ್ ಕುಮಾರ್, ಸುಬ್ರಮಣ್ಯ ಉಪಾಧ್ಯಾಯ, ಉಪಾಧ್ಯಕ್ಷರುಗಳಾಗಿ ಹೆಚ್.ಕೆ.ಮಾದಪ್ಪ, ಅರುಣ್ ಭೀಮಯ್ಯ, ಕಿಲನ್ ಗಣಪತಿ, ಆರ್.ಕೆ.ಚಂದ್ರು, ಭವ್ಯ ಅಪ್ಪಡೇರಂಡ, ಕಾಂಗೀರ ಸತೀಶ್ ಅಶ್ವಿನ್, ಮನು ಮಂಜುನಾಥ್, ಮನು ಕುಮಾರ್ ರೈ, ಕಾರ್ಯದರ್ಶಿಗಳಾಗಿ ಪ್ರಶಾಂತ್ ಭೀಮಯ್ಯ, ಕನ್ನಿಕೆ, ಮಲಚೀರ ಕವಿತ, ಉಮಾ ಪ್ರಭು, ಇಂದಿರಾ ರಮೇಶ್, ಅನಂತ ಕುಮಾರ್, ಜಯವರ್ಧನ, ಬೀನಾ ಬೊಳ್ಳಮ್ಮ, ಕೋಶಾಧಿಕಾರಿಯಾಗಿ ಕನ್ನಂಡ ಸಂಪತ್, ಮಾಧ್ಯಮ ಪ್ರಮುಖ್ ರಾಗಿ ದೀಪಕ್, ಸಜೀಲ್ ಕೃಷ್ಣನ್, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಸಚಿನ್ ಪೆಮ್ಮಯ್ಯ, ಸಹ ಸಂಚಾಲಕರಾಗಿ ದರ್ಶನ್, ಸಂಪ್ರೀತ್, ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಶಿವಕುಮಾರ್ ನಾಣಯ್ಯ, ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಮಹೇಶ್ ತಿಮ್ಮಯ್ಯ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಅಪ್ರು ರವೀಂದ್ರ, ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಪಿ.ಎಂ.ರವಿ, ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಪರಮೇಶ್ವರ, ರೈತ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಅಜ್ಜಿಕುಟ್ಟೀರ ಪ್ರವೀಣ್, ಅಲ್ಪಸಂಖ್ಯಾತರ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಜೋಸ್ ಮಟ್ಟಂ, ಮಡಿಕೇರಿ ನಗರ ಮಂಡಲದ ಅಧ್ಯಕ್ಷರಾಗಿ ಉಮೇಶ್ ಸುಬ್ರಮಣಿ, ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ, ವಿರಾಜಪೇಟೆ ತಾಲ್ಲೂಕು ಮಂಡಲ ಅಧ್ಯಕ್ಷರಾಗಿ ಸುವಿನ್ ಗಣಪತಿ ಹಾಗೂ ಸೋಮವಾರಪೇಟೆ ತಾಲ್ಲೂಕು ಮಂಡಲ ಅಧ್ಯಕ್ಷರಾಗಿ ಗೌತಮ್ ಗೌಡ ನಿಯೋಜನೆಗೊಂಡಿದ್ದಾರೆ.












