ಮಡಿಕೇರಿ ಜು.27 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ತ್ರೈಮಾಸಿಕ ‘ಕೊಡವೋಲೆ’ ಸಂಚಿಕೆಯನ್ನು ಸಾಹಿತಿ ಕಲಾವಿದರಿಗೆ ಅವಕಾಶ ನೀಡುವ ಸಲುವಾಗಿ ಪ್ರಕಟಿಸಲಾಗುತ್ತಿದೆ. ಈಗಾಗಲೇ ಹಲವಾರು ಸಂಚಿಕೆ ಬಿಡುಗಡೆಯಾಗಿದೆ. ಆದ್ದರಿಂದ ಎಲ್ಲಿಯೂ ಪ್ರಕಟವಾಗದ ತಮ್ಮ ಸ್ವಂತ ರಚನೆಯ ಕೊಡವ ಭಾಷೆಯಲ್ಲಿ ರಚಿಸಿದ ಕಥೆ, ಕವನ, ಚುಟುಕ, ವೈಚಾರಿಕ ಲೇಖನ, ನಗೆಹನಿ, ಪ್ರಬಂಧ, ಸಂಶೋಧನಾ ಲೇಖನಗಳನ್ನು ಇ-ಮೇಲ್ (kodava.acadamy@gmail.com) ಅಥವಾ ನುಡಿ ಫಾಂಟ್‌ನಲ್ಲಿ ಟೈಪ್ ಮಾಡಿ ಇಲ್ಲವೆ ಕೈ ಬರಹದಲ್ಲಿ ಅಚ್ಚುಕಟ್ಟಾಗಿ ಬರೆದು ದಿನಾಂಕ 31.08.2024ರ ಒಳಗಾಗಿ ಅಧ್ಯಕ್ಷರು/ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮ್ಯಾನ್ಸ್ ಕಾಂಪೌ0ಡ್, ಮಡಿಕೇರಿ-571201 ಈ ಕಚೇರಿಗೆ ತಲುಪಿಸಲು ಕೋರಲಾಗಿದೆ. ಅರ್ಹವಾದುದ್ದನ್ನು ಮುಂದಿನ ‘ಕೊಡವೋಲೆ’ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಬರಹಗಾರರು ಬರೆದು ಕಳುಹಿಸುವಾಗ ಹೆಸರು ಮತ್ತು ಪೂರ್ಣ ವಿಳಾಸ ನಮೂದಿಸಬೇಕು ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಬ್ಯಾಂಕ್ ಖಾತೆಯ ವಿವರವುಳ್ಳ ಪಾಸ್‌ಬುಕ್‌ನ ಜೆರಾಕ್ಸ್ ಪ್ರತಿಯನ್ನು ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ಕಚೇರಿ ದೂರವಾಣಿ 08272-229074 ಯನ್ನು ಸಂಪರ್ಕಿಸಬಹುದು.