ಮಡಿಕೇರಿ ಆ.5 NEWS DESK : ವಿರಾಜಪೇಟೆಯ ಕೊಡಗು ಹೆಗ್ಗಡೆ ಸಮಾಜ ವತಿಯಿಂದ ಕಕ್ಕಡ-18 ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.ಸಮಾಜದ ಉಪಾಧ್ಯಕ್ಷ ಕೊರಕುಟ್ಟೀರ ಸರಾ ಚಂಗಪ್ಪ ಮಾತನಾಡಿ, ಕಕ್ಕಡ ಮಾಸದಲ್ಲಿ ಬಾರಿ ಮಳೆಯ ಮತ್ತು ನಿರಂತರ ಕೃಷಿಚಟುವಟಿಕೆಗಳ ಮಧ್ಯೆ ಈ ಔಷಧೀಯ ಗುಣಗಳುಳ್ಳ ಆಹಾರ ಸೇವನೆಯಿಂದ ನಮ್ಮ ಪೂರ್ವಜರು ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುತ್ತಿದ್ದರು.
ಕಕ್ಕಡ ತಿಂಗಳಲ್ಲಿ ಕೃಷಿಯನ್ನು ಹೊರತುಪಡಿಸಿ ಮತ್ಯವುದೇ ಚಡುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರಲಿಲ್ಲ. ಆದರೆ ಇಂದಿನ ದಿನಗಳಲ್ಲಿ ಯುವಕರು ಕೃಷಿಯತ್ತ ಹೆಚ್ಚಿನ ಗಮನಹರಿಸದಿರುವುದು ವಿಷಾದನೀಯ ಎಂದರು. ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಮಾತನಾಡಿ, ಕಟ್ಟಿಕಾವೇರಪ್ಪ ಹದಿನೇಳು ವರ್ಷ ಯಾವುದೇ ಕಪ್ಪು ಚುಕ್ಕೆಗಳಿಲ್ಲದೆ ಸೇವೆಸಲ್ಲಿಸಿದ್ದು, ಇವರ ಸೇವಾವಧಿಯ ಆರಂಭದಲ್ಲಿ ಬಿಟ್ಟಂಗಾಲದಲ್ಲಿ ಸಮಾಜದ ಕಟ್ಟಡ ನಿರ್ಮಾಣ ಹಂತದಲ್ಲಿತ್ತು, ಈ ಸಂದರ್ಭದಲ್ಲಿ ಇವರು ತಮ್ಮ ವೈಯಕ್ತಿಕ ಕೆಲಸಗಳನ್ನು ಬಿಟ್ಟು ಸಮಾಜದ ಕೆಲಸದಲ್ಲಿ ತೊಡಗಿಸಿಕೊಂಡದನ್ನು ನೆನಪಿಸಿಕೊಂಡರು. ಕೊಡಗು ಹೆಗ್ಗಡೆ ಸಮಾಜದ ಗೌರವ ಕಾರ್ಯದದರ್ಶಿ ಸ್ವಇಚ್ಚೆಯಿಂದ ರಾಜಿನಾಮೆ ನೀಡಿದ್ದ ಚಂಗಚಂಡ ಕಟ್ಟಿಕಾವೇರಪ್ಪ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.
ಸಭಾ ಕಾರ್ಯಕ್ರಮದ ನಂತರ ಮದ್ದು ಪುಟ್ಟ್ ಮತ್ತು ಪಾಯಸ ಮತ್ತಿತರ ಖಾದ್ಯಗಳ ಪ್ರದರ್ಶನ ನಡೆಯಿತು. ಕಾರ್ಯದರ್ಶಿ ಪಡಿಞರಂಡ ಪ್ರಭುಕುಮಾರ್ ಸ್ವಾಗತಿಸಿದರು. ಹಿರಿಯ ನಿರ್ದೆಶಕ ಕೊಪ್ಪಡ ಪಟ್ಟುಪಳಂಗಪ್ಪ ವಂದಿಸಿದರು. ನಿರ್ದೆಶಕರುಗಳಾದ ಮೂರೀರ ಕುಶಾಲಪ್ಪ, ಚರ್ಮಂಡ ಪೂವಯ್ಯ, ಕೊಂಗೆಪ್ಪಂಡ ರಘು, ಪಂದಿಕಂಡ ಸುನಂದಾ, ಕೊರಂಡ ಪ್ರಕಾಶ್ ಸುಬ್ಬಯ್ಯ, ತಂಬಂಡ ಮಂಜು, ಮಲ್ಲಾಡ ಸುತಾ, ಮೂರೀರ ಶಾಂತಿ, ಪಂದಿಕಂಡ ನಾಗೇಶ್ ಪ್ರಮುಖರಾದ ಪಡಿಞರಂಡ ದೇವಕಿ ಅಚ್ಚಪ್ಪ, ಮುಂತಾದವರು ಹಾಜರಿದ್ದರು.
Breaking News
- *ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕಾಗಿ ಶ್ರಮಿಸಿದ ಮಹನೀಯರನ್ನು ಗೌರವಿಸೋಣ, ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ಗಣತಂತ್ರ ಹಬ್ಬದ ಮೂಲಕ ನಮ್ಮ ದೇಶದ ಸಾಂವಿಧಾನಿಕ ಅನನ್ಯತೆಯನ್ನು ಸಾರೋಣ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು*
- *ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ಸಂವಿಧಾನದ ಆಶಯಗಳಿಗೆ ಬದ್ಧರಾಗಿರೋಣ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು*
- *ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸೋಣ, ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯೋಣ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು*
- *ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ, ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ನಾವೆಲ್ಲರೂ ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡೋಣ, ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*