ಮಡಿಕೇರಿ NEWS DESK ಆ.9 : ವಿರಾಜಪೇಟೆ ಬಳಿಯ ಎವರ್ ಗ್ರೀನ್ ಕೌಂಟಿಯ ಭಜನ್ ಬೋಪಣ್ಣ ಅವರಿಗೆ 2024 ರ ಏಷ್ಯನ್ ಐಕಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೊಡಗಿನಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಕ್ಕೆ ಭಜನ್ ಬೋಪಣ್ಣ ನೀಡಿರುವ ಕೊಡುಗೆ ಹಿನ್ನಲೆಯಲ್ಲಿ ಶ್ರೀಲಂಕಾದ ಕೋಲೊಂಬೋದಲ್ಲಿನ ಭಂಡಾರನಾಯಿಕೆ ಸ್ಮಾರಕ ಸಭಾಭವನದಲ್ಲಿ ಆಯೋಜಿತ ಸಮಾರಂಭದಲ್ಲಿ ಎನಿಎಲ್ಪ್ ಸಂಸ್ಥೆ ವತಿಯಿಂದ ಈ ಪ್ರಶಸ್ತಿ ನೀಡಲಾಯಿತು, ಭಾರತೀಯ ಪ್ರವಾಸೋದ್ಯಮ ಕ್ಷೇತ್ರದ ಕುರಿತಂತೆ ಸಮಾರಂಭದಲ್ಲಿ ಮಾತನಾಡಿದ ಭಜನ್ ಬೋಪಣ್ಣ, ಜಗತ್ತಿನ ಎಲ್ಲೆಡೆಗಳಿಂದಲೂ ಎಲ್ಲಾ ವಗ೯ದ ಪ್ರವಾಸಿಗರನ್ನೂ ಆಕಷಿ೯ಸಬಲ್ಲಂಥ ಪ್ರವಾಸೀ ತಾಣಗಳು ಭಾರತದಲ್ಲಿದೆ ಎಂದು ಹೆಮ್ಮೆಯಿಂದ ನುಡಿದರು. ಅಂತೆಯೇ ಪ್ರಾಕೖತ್ತಿಕ ವಿಕೋಪಗಳು ಸಂಭವಿಸಿದ ಸಂದಭ೯ಗಳಲ್ಲಿ ಪ್ರವಾಸೋದ್ಯಮದಲ್ಲಿರುವ ಉದ್ಯಮಿಗಳು ಯಾವೆಲ್ಲಾ ರೀತಿಯಲ್ಲಿ ಸ್ಥಳೀಯ ಸಮುದಾಯಗಳ ನೆರವಿಗೆ ಸ್ಪಂದಿಸುತ್ತಾರೆ ಎಂಬ ಬಗ್ಗೆಯೂ ಕೊಡಗಿನಲ್ಲಿ ಸಂಭವಿಸಿದ ವಿಕೋಪದ ಉದಾಹರಣೆಯೊಂದಿಗೆ ಭಜನ್ ವಿವರಿಸಿದರು. ಶ್ರೀಲಂಕಾದ ರಾಜ್ಯಪಾಲರು, ಸಾಕ್೯ ಸಮಿತಿ ಸದಸ್ಯರು,ಪ್ರಧಾನಿಗಳು, ಮಾಜಿ ಪ್ರಧಾನಿಗಳೂ ಸೇರಿದಂತೆ ಗಣ್ಯಾತಿಗಣ್ಯರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.










