ಮಡಿಕೇರಿ ನ.29 NEWS DESK : ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕರಿಕೆ- ಭಾಗಮಂಡಲ ರಾಜ್ಯ ಹೆದ್ದಾರಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಚಾಲನೆ ನೀಡಿದರು. ಕರಿಕೆಯಲ್ಲಿ ಭೂಮಿಪೂಜೆ ನೆರವೇರಿಸಿದ ಶಾಸಕರು ಗುಣಮಟ್ಟದ ಕಾಮಗಾರಿ ನಡೆಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಕರಿಕೆ ಗಡಿ ಭಾಗದಲ್ಲಿರುವ ಪಂಚಾಯಿತಿಯ ಬಸ್ ನಿಲ್ದಾಣದ ಜಾಗವನ್ನು ಪರಿಶೀಲಿಸಿದ ಅವರು ಬಸ್ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲಾಗುವುದು, ಗಡಿಭಾಗ ಚೆಂಬೇರಿಯಲ್ಲಿ ಕರ್ನಾಟಕಕ್ಕೆ ಸ್ವಾಗತ ದ್ವಾರವನ್ನು ನಿರ್ಮಿಸಲಾಗುವುದು ಮತ್ತು ಸಾರ್ವಜನಿಕರ ಅನುಕೂಲಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಕರಿಕೆ ಗ್ರಾ.ಪಂ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್, ಉಪಾಧ್ಯಕ್ಷರಾದ ಕಲ್ಪನಾ ಜಗದೀಶ್, ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ.ದೇವರಾಜ್, ಜಿಲ್ಲಾ ಸರಕಾರಿ ವಕೀಲ ಎನ್.ಶ್ರೀಧರನ್ ನಾಯರ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪಿ.ಪಿ.ಗಣಪತಿ, ಸದಸ್ಯರುಗಳಾದ ಆಯಿಷಾ ಎಂ.ಹೆಚ್, ಪಿ.ಪಿ.ರಾಜಕುಮಾರ, ಕೆ.ಎ.ದೇವದತ್ತ, ಜಯಶ್ರೀ, ಕೆ.ಎ.ನಾರಾಯಣ, ಸಹಕಾರ ಬ್ಯಾಂಕ್ ನಿರ್ದೇಶಕರಾದ ಕೆ.ಪಿ.ಸುಬ್ರಮಣಿ, ಕೆ.ಕೆ.ಜಗದೀಶ, ಟಿ.ಆರ್.ಶ್ರೀನಿವಾಸ, ಧನ್ಯ ಶ್ರೀ ಕುಮಾರ, ಬೂತ್ ಅಧ್ಯಕ್ಷರುಗಳಾದ ಎ.ಯು.ಉಮ್ಮರ್, ಕೆ.ಸಿ.ಕೃಷ್ಣ, ಪಂಚಾಯಿತಿ ಮಾಜಿ ಸದಸ್ಯ ಜಯನ್ ಎ.ಎಂ, ಪ್ರಮುಖರಾದ ಕೆ.ಆರ್.ಶಿವಪ್ಪ, ಬಿ.ಆರ್.ಬಾಲಕೃಷ್ಣ, ಎ.ಡಿ.ಆಬಿದ್, ಸುಬೈರ್ ಎಂ.ಇ, ಸಿದ್ದಿಕ್ ಎಂ.ಹೆಚ್ ಹಾಗೂ ಗ್ರಾಮಸ್ಥರು ಹಾಜರಿದ್ದರು.