ಸೋಮವಾರಪೇಟೆ ಜ.3 NEWS DESK : ಸೋಮವಾರಪೇಟೆ ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಾಮೂಹಿಕ ನವಗ್ರಹ ಪೂಜಾ ಕಾರ್ಯಕ್ರಮ ನೆರವೇರಿತು. ಶಾಂತಳ್ಳಿ ವಲಯದ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮುದಾಯ ಭವನದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯ ಹಾಗೂ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್ ಗೌಡ ಪಾಲ್ಗೊಂಡು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಐಗೂರು ಮುತ್ತಪ್ಪಸ್ವಾಮಿ ದೇವಸ್ಥಾನಕ್ಕೆ 2 ಲಕ್ಷ, ಹರಿಹರ ಯುವಕ ಮಂಡಲದ ಸಮುದಾಯ ಭವನಕ್ಕೆ 2 ಲಕ್ಷ ಹಾಗೂ ಗರಗಂದೂರು ಗ್ರಾ.ಪಂ ವ್ಯಾಪ್ತಿಯ ಹೊಸತೋಟ ಗ್ರಾಮಕ್ಕೆ ಸಿಲಿಕಾನ್ ಛೇಂಬರ್ ಮಂಜೂರಾತಿ ಪತ್ರ ವಿತರಣೆ ಮಾಡಿದರು. ಯಡೂರು ಸಮುದಾಯ ಭವನಕ್ಕೆ 1.50 ಲಕ್ಷ ಅನುದಾನದ ಮಂಜುರಾತಿ ಪತ್ರ ವಿತರಿಸಿದರು. ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿ.ಎ.ಸಿ.ಎಸ್ ಅಧ್ಯಕ್ಷ ಶಿವಕುಮಾರ್, ಗ್ರಾ.ಪಂ ಅಧ್ಯಕ್ಷ ಜಿ.ಕೆ.ವಿನೋದ್, ತಾ.ಪಂ ಮಾಜಿ ಸದಸ್ಯ ಸಬಿತಾ ಚನ್ನಕೇಶವ, ವಿ.ಎಸ್ ಎಸ್ ಎನ್ ಬ್ಯಾಂಕ್ ನಿರ್ದೇಶಕ ಚಂಗಪ್ಪ, ಗ್ರಾ.ಪಂ ಮಾಜಿ ಸದಸ್ಯ ಕೆ.ಪಿ.ದಿನೇಶ್, ಎಲ್.ಎಮ್. ರಾಜೇಶ್, ತಾಲೂಕು ಯೋಜನಾಧಿಕಾರಿಗಳಾದ ಹೆಚ್.ರೋಹಿತ್ ಹಾಜರಿದ್ದರು. ಮೇಲ್ವಿಚಾರಕರಾದ ಲಕ್ಷ್ಮಣ ಹಾಗೂ ಸೇವಾಪ್ರತಿನಿಧಿ ಚೆನ್ನಮ್ಮ ಕಾರ್ಯರ್ಕ್ರಮ ನಿರೂಪಿಸಿದರು.