ಮಡಿಕೇರಿ ಫೆ.17 NEWS DESK : ಭಾಗ್ಯಲಕ್ಷ್ಮಿ ಯೋಜನೆಯಡಿ ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ರಕ್ಕಣೆಗಾಗಿ 2006-07 ರಲ್ಲಿ ರಾಜ್ಯದಲ್ಲಿ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಗೆ 2006-07 ರಲ್ಲಿ ಜಿಲ್ಲೆಯ 1355 ಫಲಾನುಭವಿಗಳು ನೋಂದಾಯಿಸಿ ಬಾಂಡ್ ಪಡೆದಿದ್ದಾರೆ. ಈ ಸಾಲಿನಲ್ಲಿ ಬಾಂಡ್ ಪಡೆದಿರುವ 18 ವರ್ಷ ಪೂರ್ಣಗೊಂಡ ಫಲಾನುಭವಿಗಳು ತಮ್ಮ ಪೋಷಕರೊಂದಿಗೆ ದಾಖಲಾತಿ ಹಾಗೂ ಫಲಾನುಭವಿಯ ಆಧಾರ್ ಕಾರ್ಡ್ ಜೋಡಣೆಯಾಗಿರುವ ಸಂಖ್ಯೆಯ ಮೊಬೈಲ್ ನೊಂದಿಗೆ ತಮ್ಮ ವ್ಯಾಪ್ತಿಗೆ ಬರುವ ಸಿಡಿಪಿಒ ಕಚೇರಿಗೆ ಖುದ್ದಾಗಿ ಅವಶ್ಯವಿರುವ ನಮೂನೆಗಳಿಗೆ ಸಹಿ ಮಾಡಿ ಮೊತ್ತ ಪಡೆದುಕೊಳ್ಳವುದು. ದಾಖಲೆಗಳು ಎಲ್‍ಐಸಿ ಸಂಸ್ಧೆಯಿಂದ ನೀಡಲಾದ ಭರ್ತಿ ಮಾಡಿದ ನಮೂನೆ. ಚಾಲ್ತಿಯಲ್ಲಿರುವ ಬ್ಯಾಂಕ್ ಅಕೌಂಟ್ ಸಂಖ್ಯೆ, ಐಎಪ್‍ಎಸ್‍ಸಿ ಕೋಡ್ ಮತ್ತು ಆಧಾರ್ ಸಂಖ್ಯೆ ಅವಶ್ಯಕತೆ ಮೂಲ (0 ಬ್ಯಾಲನ್ಸ್ ಇದ್ದಲ್ಲಿ ಅದನ್ನು ತೆಗೆಸಬೇಕು) ಭಾಗ್ಯಲಕ್ಷ್ಮಿ ಮೂಲ ಬಾಂಟ್ ಲಗತ್ತಿಸುವುದು, ಮಗುವಿನ ಜನನ ಪ್ರಮಾಣ ಪತ್ರ ಲಗತ್ತಿಸುವುದು, ತಂದೆ-ತಾಯಿ ಪೋಷಕರ ಮಗುವಿನ ಹೆಸರು ಬದಲಾವಣೆಯಾಗಿದ್ದಲ್ಲಿ ಸಿಡಿಪಿಒ ಅವರಿಂದ ದೃಢೀಕರಣ ಪ್ರತಿ, ಶಾಲೆಯಿಂದ ಪಡೆದ ವ್ಯಾಸಂಗ ಪ್ರಮಾಣ ಪತ್ರ ಲಗತ್ತಿಸುವುದು. (ಕನಿಷ್ಠ 8ನೇ ತರಗತಿ) ಮೂಲ ಬಾಂಡ್ ಕಳೆದು ಹೋಗಿದ್ದಲ್ಲಿ ಜೆರಾಕ್ಸ್ ಪ್ರತಿಯೊಂದಿಗೆ ಎಫ್‍ಐಆರ್ ಪತ್ರಿಯನ್ನು ಲಗತ್ತಿಸುವುದು. ಬಾಂಡ್ ಜೆರಾಕ್ಸ್ ಪತ್ರಿಯು ಇಲ್ಲದಿದ್ದಲ್ಲಿ. ಪ್ರಕೃತಿ ವಿಕೋಪದಿಂದ ಮನೆಗಳು ಕೊಚ್ಚಿ ಹೋಗಿ ಬಾಂಡ್‍ಗಳು ಇಲ್ಲದಿದ್ದಲ್ಲಿ ಆನ್‍ಲೈನ್‍ನಲ್ಲಿ ಇರುವ ಪ್ರತಿಗೆ ಸಿಡಿಪಿಒ ಅವರು ದೃಢೀಕರಿಸಿ ಲಗತ್ತಿಸುವುದು. ದತ್ತು ಮಕ್ಕಳು ಇದ್ದಲ್ಲಿ ಕಾನೂನಾತ್ಮಕವಾಗಿ ದತ್ತು ಪಡೆದ ಪೋಷಕರ ಹೆಸರನ್ನು ಸಿಡಿಪಿಒ ದೃಢೀಕರಿಸು ಲಗತ್ತಿಸುವುದು. ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯಾಗಿ ಹತ್ತಿರದ ಅಂಗನವಾಡಿ ಕೇಂದ್ರವು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳ ಕಚೇರಿ ಸಂಪರ್ಕಿಸುವುದು. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಡಿಕೇರಿ ತಾಲೂಕು ದೂರವಾಣಿ ಸಂಖ್ಯೆ : 08272-295087, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಸೋಮವಾರಪೇಟೆ ತಾಲೂಕು ದೂರವಾಣಿ ಸಂಖ್ಯೆ : 08276-20023, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಪೊನ್ನಂಪೇಟೆ ತಾಲೂಕು ದೂರವಾಣಿ ಸಂಖ್ಯೆ : 082740201878. ಸಂಪರ್ಕಿಸಬಹುದು. ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜು ತಿಳಿಸಿದ್ದಾರೆ.











