


ನಾಪೋಕ್ಲು ಮಾ.15 NEWS DESK : ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಉತ್ಸವದ ಅಂಗವಾಗಿ ದೇವಾಲಯದಲ್ಲಿ ಮುಂಜಾನೆಯಿಂದಲೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು. ದೇವಾಲಯದಲ್ಲಿ ಎತ್ತುಪೋರಾಟ, ಮಹಾಪೂಜೆ ಮಹಾಮಂಗಳಾರತಿ, ಜರುಗಿತು. ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರುಗಿತು. ದೇವರ ಪ್ರದರ್ಶನ, ನೃತ್ಯ ಸೇವೆ ನೆರವೇರಿತು. ಇಗ್ಗುತ್ತಪ್ಪ ದೇವರ ಆದಿ ಸ್ಥಳವಾದ ಮಲ್ಮ ಬೆಟ್ಟಕ್ಕೆ ಎತ್ತುಪೋರಾಟದೊಂದಿಗೆ ತೆರಳಿ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಭಕ್ತಾಧಿಗಳು ತಮ್ಮ ಇಷ್ಟಾರ್ಥ ಸಿದ್ಧಿಗೆ ತುಲಾಭಾರ ಸೇವೆ, ಕಾಫಿ, ಕಾಳುಮೆಣಸು, ಎಣ್ಣೆ ಸೇರಿದಂತೆ ಮತ್ತಿತರ ಹರಕೆ ಒಪ್ಪಿಸಿದರು. ತಂತ್ರಿ ಸಂತೋಷ್ ಹೆಬ್ಬಾರ್, ಅರ್ಚಕ ವಿಜಯಕುಮಾರ್ ಹಾಗೂ ಜಯಚಂದ್ರ (ಪುಂಡ) ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಉತ್ಸವದಲ್ಲಿ ತಕ್ಕಮುಖ್ಯಸ್ಥರಾದ ಬದಂ ಜೆಟ್ಟೀರ ನಾಣಯ್ಯ, ನಾಪನೆರವಂಡ ಪೊನ್ನಪ್ಪ, ಬಾಳೆಯಡ ರಾಜ ಕುಂಞಪ್ಪ, ಕೈಯಂದಿರ ರಮೇಶ್ ಉತ್ತಯ್ಯ, ದೇವಾಲಯದ ಆಡಳಿತ ಮಡಳಿ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ, ಉಪಾಧ್ಯಕ್ಷ ಮಂಡಿರ ಜಯ ದೇವಯ್ಯ , ಕಾರ್ಯದರ್ಶಿ ಮುಕ್ಕಾಟಿರ ವಿನಯ್, ಖಜಾಂಚಿ ಮನವಟ್ಟಿರ ಪಾಪು ಚಂಗಪ್ಪ, ಆಡಳಿತ ಮಡಳಿ ನಿರ್ದೇಶಕರದ ಚೇಕ್ ಪೂವ0ಡ ಅಪ್ಪಚ್ಚು, ಮಾಲೆಯಂಡ ಅಯ್ಯಪ್ಪ., ಅಪ್ಪುಮ ಣಿಯಂಡ ಸನ್ನುಸೋಮಣ್ಣ, ಬದಂಜೆಟ್ಟಿರ ದೇವಿ ದೇವಯ್ಯ, ಬಾಳೆಯಡ ಶಿವಕುಮಾರ್. ನಾಪನೆರವಂಡ ದೇವಯ್ಯ. ಅಪ್ಪುಮಣಿಯoಡ ಪ್ರವೀಣ್ ಉತ್ತಪ್ಪ ಆಡಳಿತ ಮಂಡಳಿಯ ಮಾಜಿ ಪದಾಧಿಕಾರಿಗಳು, ಸದಸ್ಯರು, ಊರಿನ ಹಿರಿಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.