



ಮಡಿಕೇರಿ ಮಾ.18 NEWS DESK : ಸೆಪಿಎಂಟ್ ಕಾಲೇಜ್ ನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಅಂತರ ಕಾಲೇಜು 5A ಸೈಡ್ ರಿಂಕ್ ಹಾಕಿ ಪಂದ್ಯಾವಳಿ ವಿರಾಜಪೇಟೆ ಕಾವೇರಿ ಕಾಲೇಜಿನ ಹಾಕಿತಂಡವು ದ್ವಿತೀಯ ಸ್ಥಾನ ಪಡೆಯುದರ ಮೂಲಕ ಸಾಧನೆಯನ್ನು ಮಾಡಿದೆ. ಒಟ್ಟು 21 ತಂಡಗಳು ಪಾಲ್ಗೊಂಡಿದ್ದ ಕ್ರೀಡಾಕೂಟದಲ್ಲಿ ಅಂತಿಮ ಪೈನಲ್ ಹಣಾಹಣಿ ವಿರಾಜಪೇಟೆ ಕಾವೇರಿ ಪದವಿ ಕಾಲೇಜಿ ಹಾಗೂ ಎಂ.ಎಂ.ಕಾಲೇಜು ಗದಗ ನಡುವೆ ನಡೆದು 6-7 ಒಂದು ಗೋಲಿನ ಅಂತರದಲ್ಲಿ ಸೋಲನ್ನು ಅನುಭವಿಸಿತ್ತು. ಇದಕ್ಕೂ ಮೊದಲು ಲೀಗ್ ಹಂತದಲ್ಲಿ ರಾಮಯ್ಯ ಕಾಲೇಜನ್ನು 10-3 , ವಿದ್ಯಾ ವಿಕಾಸ ಕಾಲೇಜನ್ನು 8-2 , ಸೆಂಟ್ ಆನ್ಸ್ ಪದವಿ ಕಾಲೇಜನ್ನು 11-1 ಗೋಲುಗಳಿಂದ ಸೋಲಿಸಿ ಸೆಮಿ ಫೈನಲ್ಸ್ ಗೆ ಲಗ್ಗೆ ಇಟ್ಟಿತು. ಸೆಮಿ ಫೈನಲ್ಸ್ ನಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜನ್ನು 3-2 ಗೋಲಿನಲ್ಲಿ ಸೋಲಿಸಿ ಅಂತಿಮವಾಗಿ ಫೈನಲ್ಸ್ ಗೆ ತಲುಪಿ ಎಂ.ಎಂ.ಕಾಲೇಜು ಗದಗದ ನಡುವೆ ನಡೆದ ವಿರೋಚಿತ ಪಂದ್ಯದಲ್ಲಿ 6 -7 ಒಂದು ಗೋಲಿನ ಅಂತರದಲ್ಲಿ ಸೋಲನ್ನು ಒಪ್ಪಿಕೊಂಡು ದ್ವಿತೀಯ ಸ್ಥಾನ ಪಡೆಯುದರೊಂದಿಗೆ 10 ಸಾವಿರ ನಗದು ವೈಯಕ್ತಿಕ ಪಾರಿತೋಷಕ ಹಾಗೂ ರನ್ನರ್ಸ ಟ್ರೋಪಿ ಪಡೆದುಕೊಂಡಿದೆ. ಪಂದ್ಯಾವಳಿಯಲ್ಲಿ 14 ಗೋಲು ದಾಖಲಿಸುದರ ಮೂಲಕ ಪಂದ್ಯಾವಳಿಯಲ್ಲಿ ಅತೀ ಹೆಚ್ಚು ಗೋಲು ದಾಖಲಿಸಿದ ಸಾಧನೆಯನ್ನು ವಿರಾಜಪೇಟೆ ಕಾವೇರಿ ಕಾಲೇಜಿನ ಎ.ಎ.ನಾಚಪ್ಪ ಮಾಡಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆ ಸಲ್ದಾನ ಕಾಲೇಜಿನ ಹಾಕಿ ತಂಡವನ್ನು ಹಾಗೂ ದೈಹಿಕ ನಿರ್ದೇಶಕರಾದ ತಮ್ಮಯ್ಯ ಅವರನ್ನು ಕಾಲೇಜಿನ ಪರವಾಗಿ ಅಭಿನಂದಿಸಿದ್ದಾರೆ.