ಬೆಂಗಳೂರು ಆ.28 NEWS DESK : ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಉದ್ಯಮಿ ರೋಷನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಅನುಶ್ರೀ ಮದುವೆ ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದಲ್ಲಿ ನಡೆದಿದೆ. ಕೊಡಗು ಮೂಲದ ರಾಮಮೂರ್ತಿ ಹಾಗೂ ಸಿಸಿಲಿಯಾ ಅವರ ಪುತ್ರ ರೋಷನ್ ಜೊತೆ ಅನುಶ್ರೀ ವಿವಾಹ ಆಗಿದ್ದಾರೆ. ನಿರೂಪಕಿ ಅನುಶ್ರೀ ಹಾಗೂ ರೋಷನ್ ಅದ್ಧೂರಿ ಮದುವೆಗೆ ಶಿವರಾಜ್ ಕುಮಾರ್, ರಾಜ್ ಬಿ ಶೆಟ್ಟಿ, ಶರಣ್, ನೆನಪಿರಲಿ ಪ್ರೇಮ್, ಕಾವ್ಯ ಶಾ, ಸೋನಲ್ ಮೊಂಥೆರೋ, ನಟ ನಾಗಭೂಷಣ್, ಚೈತ್ರಾ ಜೆ ಆಚಾರ್, ಸೇರಿದಂತೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ಶುಭ ಹಾರೈಸಿದ್ದಾರೆ.










