

ಮಡಿಕೇರಿ ಸೆ.8 NEWS DESK : ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ನಿಯೋಜನಾ ಕಾರ್ಯಕ್ರಮದ ಅಂಗವಾಗಿ ರೈತರ ಹೊಲದಲ್ಲಿ ಮಣ್ಣಿನ ಮಾದರಿ ಸಂಗ್ರಹಣಾ ವಿಧಾನವನ್ನು ಪ್ರದರ್ಶಿಸಿದರು. ಈ ಸಂದರ್ಭ ವಿದ್ಯಾರ್ಥಿಗಳು ರೈತರಿಗೆ ಮಣ್ಣಿನ ಪರೀಕ್ಷೆಯ ಮಹತ್ವ, ಮಣ್ಣಿನ ಆರೋಗ್ಯ ಕಾಪಾಡುವ ಅಗತ್ಯ ಹಾಗೂ ಶಾಶ್ವತ ಕೃಷಿಯಿಂದ ಉತ್ತಮ ಆದಾಯ ಸಾಧಿಸುವ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಪ್ರಯತ್ನವನ್ನು ರೈತರು ಮೆಚ್ಚಿ, ತಾವೇ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಸಮೀಪದ ಕೃಷಿ ಸಂಪನ್ಮೂಲ ಕೇಂದ್ರಗೆ ಸಲ್ಲಿಸಲು ಮುಂದಾದರು.











