ಮಡಿಕೇರಿ ನ.4 NEWS DESK : ಕೊಡಗು ಗೌಡ ಹಿತರಕ್ಷಣ ಸಮಿತಿ ನಿಯೋಗವು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಮುಂದಿನ ಸಚಿವ ಸಂಪುಟದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣನವರಿಗೆ ಸಚಿವ ಸ್ಥಾನ ನೀಡುವಂತೆ ನಿಯೋಗದ ಪ್ರಮುಖರು ಮನವಿ ಮಾಡಿದರು. ಈ ಸಂದರ್ಭ ಸಮಿತಿಯ ಪರ್ಮಲೆ ಗಣೇಶ್, ಪಟ್ಟಡ ದೀಪಕ್ ಸುರೇಶ್ ಪಿಎಲ್, ಪೂಜಾರಿರ ಪ್ರದೀಪ್ ಕುಮಾರ್, ಕಾಲೇರಮ್ಮನ ಕುಮಾರ್, ವಿಜಯ್ ಕುಮಾರ್ ಕನ್ಯಾನ, ರಿತಿನ್ ಡೆಮ್ಮಲೆ ಮೊದಲಾದವರು ಉಪಸ್ಥಿತರಿದ್ದರು.











