ಕುಶಾಲನಗರ ನ.13 NEWS DESK : ಕೂಡುಮಂಗಳೂರು ಮಂತರ್ ಗೌಡ ಅಭಿಮಾನಿ ಬಳಗದ ವತಿಯಿಂದ ಶಾಸಕ ಡಾ.ಮಂತರ್ ಗೌಡ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಡಾ. ಮಂತರ್ ಗೌಡ ವಯೋವೃದ್ಧರ ಯೋಗ ಕ್ಷೇಮ ವಿಚಾರಿಸಿ, ಕೇಕ್ ಕತ್ತರಿಸಿ ಸಿಹಿ ಹಂಚಿದರು. ನಂತರ ಊಟದ ವ್ಯವಸ್ಥೆಯನ್ನು ಕಲ್ಪಿಸಿದರು. ಕೂಡುಮಂಗಳೂರು ಮಂತರ್ ಗೌಡ ಅಭಿಮಾನಿ ಬಳಗದ ಪ್ರಮುಖರಾದ ಎಂ. ನಾಗರಾಜ್, ಮಧು ಚಂದ್ರ, ಕಾಂತಾರಾಜ್, ಪುನೀತ್ ಕುಮಾರ್, ಮಧು, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಅನಂತ, ಅರುಣ್ ರಾವ್, ಚಂದ್ರು, ಕೂಡ್ಲೂರು ಈರಪ್ಪ, ಗಿರೀಗೌಡ, ಲೋಕೇಶ್, ಧರ್ಮ, ಅಣ್ಣಚಿ, ಹರೀಶ್, ಶ್ರೀ ಶಕ್ತಿ ವೃಧ್ದಾಶ್ರಮ ಮೇಲ್ವಿಚಾರಕ ಬಿ.ಎಸ್. ಚಂದ್ರು ಸೇರಿದಂತೆ ಬಳಗದ ಸದಸ್ಯರು, ಅಭಿಮಾನಿಗಳು ಹಾಜರಿದ್ದರು.











