ಮಡಿಕೇರಿ ನ.29 NEWS DESK : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ ಆರ್ಥಿಕತೆಯ ಯಾವುದೇ ವಿಭಾಗದಿಂದ ಮೂಡಿದ ಜನಸಾಮಾನ್ಯರ ಅದರಲ್ಲೂ ಗ್ರಾಮೀಣ ಪ್ರದೇಶದ ಜನಜೀವನವನ್ನು ಪರಿವರ್ತಿಸಲು ಸಹಾಯಕವಾದ ಅಥವಾ ಉದ್ಯಮಗಳು ಹಾಗೂ ಉದ್ಯೋಗ ಸೃಷ್ಟಿಗೆ ಕಾರಣವಾದ ಅನುಕರಣೀಯ ಆವಿಷ್ಕಾರಗಳು, ಪರಿಹಾರಗಳನ್ನು ಪ್ರತಿ ವರ್ಷ ಗುರುತಿಸಿ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಗೂ ಬೋಧಕರಿಗೆ ಮತ್ತು ಜನಸಾಮಾನ್ಯರಿಗೆ ಸ್ನಾತಕೋತ್ತರ ವಿದ್ಯಾರ್ಥಿಗಳ ಅತ್ಯುತ್ತಮ ಆವಿಷ್ಕಾರ/ ನಾವಿನ್ಯತೆಗೆ ಪ್ರೊ.ಯು.ಆರ್.ರಾವ್ ಪುರಸ್ಕಾರ, ಪದವಿ ವಿದ್ಯಾರ್ಥಿಗಳ ಅತ್ಯುತ್ತಮ ಆವಿಷ್ಕಾರ/ ನಾವಿನ್ಯತೆಗೆ ಡಾ.ಎಸ್.ಕೆ.ಶಿವಕುಮಾರ್ ಪುರಸ್ಕಾರ ಮತ್ತು ಬೋಧಕರು ಹಾಗೂ ಜನಸಾಮಾನ್ಯರ ಅತ್ಯುತ್ತಮ ಆವಿಷ್ಕಾರ/ನಾವಿನ್ಯತೆಗೆ ಪ್ರೊ.ಎಸ್.ಅಯ್ಯಪ್ಪನ್ ಪುರಸ್ಕಾರ ಈ ಆವಿಷ್ಕಾರ/ನಾವೀನ್ಯತೆಗೆ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಈ ಪುರಸ್ಕಾರಕ್ಕೆ ರೂ.10 ಸಾವಿಗಳ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಆಸಕ್ತರು ಡಿಸೆಂಬರ್, 31 ರೊಳಗೆ ಅಕಾಡೆಮಿಯ ವೆಬ್‍ಸೈಟ್‍ನಲ್ಲಿ https://kstacademy.in ನೀಡಿರುವ ಮಾರ್ಗಸೂಚಿಯನ್ವಯ ಆನ್‍ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಶ್ರೀನಿವಾಸು (ಮೊ.9620767819) ಹಾಗೂ ಚಂದ್ರಶೇಖರಮೂರ್ತಿ (ಮೊ.9686449019/ 080-29721550) ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಆನಂದ್ ಅವರು ತಿಳಿಸಿದ್ದಾರೆ.










