ನಾಪೋಕ್ಲು ಡಿ.16 NEWS DESK : ಶಿಸ್ತು, ವಿದೇಯತೆ ಮತ್ತು ಸಮಯ ಪಾಲನೆ ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕಾದ ಉತ್ತಮ ಹವ್ಯಾಸಗಳು ಎಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಚೌರಿರ ಡಾ.ಜಗತ್ ತಿಮ್ಮಯ್ಯ ಹೇಳಿದರು. ನಾಪೋಕ್ಲು ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಪೆÇೀಷಕರು ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ನೀಡದಿದ್ದರೆ ಮಕ್ಕಳು ಬೆಳೆಯಲು ಸಾಧ್ಯವಿಲ್ಲ. ಪೋಷಕರು ಮಕ್ಕಳಿಗೆ ಶಿಸ್ತು ಮತ್ತು ಸಮಯ ಪಾಲನೆಯ ಮಹತ್ವದ ಅರಿವು ಮೂಡಿಸಬೇಕು. ಮಕ್ಕಳಿಗೆ ಯಾವತ್ತು ಒಳ್ಳೆಯದನ್ನು ಹೇಳಿಕೊಡಬೇಕು. ಮಕ್ಕಳ ಬುದ್ಧಿ ಸ್ಮಿತಕ್ಕೆ ಬಂದಾಗ ಅವರು ಖಂಡಿತ ಒಳ್ಳೆಯದನ್ನು ಪಾಲಿಸುತ್ತಾರೆ ಎಂದರು. ಕೊಡಗಿನ ಮಕ್ಕಳಲ್ಲಿ ಶಿಸ್ತು ಇದೆ. ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರು ಜೀವನದುದ್ದಕ್ಕು ಶಿಸ್ತನ್ನು ಪಾಲಿಸಿದರು. ಅಂತಹ ನಾಡಿನಲ್ಲಿ ಹುಟ್ಟಿದ ಮಕ್ಕಳು ಶಿಸ್ತುಬದ್ಧ ಜೀವನ ನಡೆಸಲು ಶಕ್ತರು ಎಂದ ಅವರು, ಇಂದಿನ ದಿನಗಳಲ್ಲಿ ಆಂಗ್ಲ ಭಾಷೆಯ ಅಗತ್ಯ ಬಹಳಷ್ಟು ಇದೆ. ಭಾಷೆ ಕಲಿತರೆ ಎಲ್ಲಿ ಹೋದರು ಯಶಸ್ಸು ಸಿಗುತ್ತದೆ. ನಮ್ಮ ಜೀವನದ ಬಹುಪಾಲು ಅವಧಿಯನ್ನು ಮೊಬೈಲ್ ಆಕ್ರಮಿಸಿಕೊಂಡಿದೆ. ಮೊಬೈಲ್‍ನಲ್ಲಿ ಉತ್ತಮವಾದ ವಿಚಾರಗಳಿವೆ. ಆ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದು ಜಗತ್ ತಿಮ್ಮಯ್ಯ ಹೇಳಿದರು. ಶಾಲೆಯಲ್ಲಿ ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳು ಹತ್ತು ಹಲವಾರು ಇವೆ. ಎನ್‍ಸಿಸಿ ಅಂತಹ ಸಹಪಠ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಎಸಿಸಿಯಲ್ಲಿ ತೊಡಗಿಸಿಕೊಂಡರೆ ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು. ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನಗಳನ್ನು ಪಡೆದಿದ್ದು ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ ಎಂದ ಅವರು ಸಂಸ್ಥೆಯ ಉನ್ನತಿಕರಣಕ್ಕೆ ಎಲ್ಲರ ಸಹಕಾರ ಅವಶ್ಯಕತೆವಾಗಿದ್ದು ಸಹಕರಿಸುವಂತೆ ಮನವಿ ಮಾಡಿದರು. ಪೋಷಕರು ಮಕ್ಕಳ ಓದಿನ ಬಗ್ಗೆ ಗಮನಹರಿಸಿ ಕೈಜೋಡಿಸುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭ ಆಡಳಿತ ಮಂಡಳಿಯ ಉಪಾಧ್ಯಕ್ಷ ನೆರವಂಡ ಸುನಿಲ್ ದೇವಯ್ಯ, ಕಾರ್ಯದರ್ಶಿ ನಾಯಕಂಡ ದೀಪಕ್ ಚಂಗಪ್ಪ, ನಿರ್ದೇಶಕರುಗಳಾದ ಬಿದ್ದಾಟಂಡ ಪಾಪ ಮುದ್ದಯ್ಯ, ಬಿದ್ದಾಟಂಡ ಮುತ್ತಣ್ಣ, ಬೊಳ್ಳಚೆಟ್ಟಿರ ಸುರೇಶ್, ಕಲಿಯಂಡ ಕೌಶಿಕ್ ಕುಶಾಲಪ್ಪ, ಅಪ್ಪಚೆಟೊಳಂಡ ನವೀನ್ ಅಪ್ಪಯ್ಯ, ಚೌರಿರ ಮಂದಣ್ಣ, ಭಟ್ಟಿರ ಸುಬ್ಬಯ್ಯ, ಹಾಗೂ ಕೇಟೋಳಿರ ಅಪ್ಪಚ್ಚ ಶಿಕ್ಷಕ ಬೃಂದಾ, ಸಿಬ್ಬಂದಿ, ಪೆÇೀಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಶಿಕ್ಷಕಿ ಪಾಡಿಯಮ್ಮಂಡ ಚಂದ್ರಕಲಾ ಮಹೇಶ್ ಸ್ವಾಗತಿಸಿದರು. ಕಲ್ಯಾಟಂಡ ತನುಜ ಅತಿಥಿಗಳ ಪರಿಚಯ ಮಾಡಿದರು. ಶಾಲಾ ಚಟುವಟಿಕೆ ವರದಿಯನ್ನು ವಿದ್ಯಾರ್ಥಿ ನಾಯಕಿ ಸಾನ್ವಿಕ ಹಾಗೂ ಶಾಲಾ ವರದಿಯನ್ನು ಪ್ರಾಂಶುಪಾಲೆ ಕಲ್ಯಾಟಂಡ ಶಾರದಾ ವಾಚಿಸಿದರು, ಉದಿಯಂಡ ಶ್ವೇತಾ ಲೀಲಾವತಿ ಹಾಗೂ ಬೊಟ್ಟೋಳಂಡ ಸೌಮ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಬೊಳ್ಳಚೆಟ್ಟಿರ ಶೋಭ ವಂದಿಸಿದರು. ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಜನಮನ ಸೆಳೆಯಿತು.
ವರದಿ : ದುಗ್ಗಳ ಸದಾನಂದ.











