ಸುಂಟಿಕೊಪ್ಪ ಡಿ.16 NEWS DESK : ಗ್ರಾಮ ಪಂಚಾಯಿತಿ ನೌಕರರ ಪ್ರಮುಖ 17 ಬೇಡಿಕೆಗಳಲ್ಲಿ ಕೆಲವನ್ನು ಮುಂದಿಟ್ಟುಕೊಂಡು ಡಿ.20 ರಿಂದ ಬೆಂಗಳೂರಿನಲ್ಲಿ ಅನಿರ್ಧಿಷ್ಟವಾದಿ ಧರಣಿ ಸತ್ಯಾಗ್ರಹವನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಹೇಳಿದ್ದಾರೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸರಿಸುಮಾರು 36 ಸಾವಿರ ನೌಕರರು ಇದ್ದು, 17 ಪ್ರಮುಖ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ನಿರಂತರ ಹೋರಾಟ ಮಾಡುತ್ತ ಬರಲಾಗಿದೆ. ಕೆಲವು ಬೇಡಿಕೆಗಳನ್ನು ಪಡೆಯಲಾಗಿದ್ದರೂ ಕೂಡ ಪ್ರಸ್ತುತ ಬೆಲೆ ಏರಿಕೆ ಆಧಾರದಲ್ಲಿ ಕನಿಷ್ಠ ವೇತನ ರೂ.36 ಸಾವಿರ ನಿಗಧಿಗಾಗಿ ಇದನ್ನೇ ಮಾನದಂಡವಾಗಿ ಇಟ್ಟುಕೊಂಡು ವಾರ್ಷಿಕ ವರಮಾನ ಹೆಚ್ಚು ಮಾಡಲು ಒತ್ತಾಯಿಸಿ ಕಾರ್ಮಿಕರ ಬಿಪಿಎಲ್ ಕಾರ್ಡ್ ರದ್ದು ಪಡಿಸದಿರಲು ಹೋರಾಟ ನಡೆಸಲಾಗುವುದೆಂದು ಅವರು ಹೇಳಿದರು. ಜೊತೆಗೆ ಸೇವ ಹಿತನದ ಆಧಾರದಲ್ಲಿ ವೇತನ ನಿಗಧಿಪಡಿಸಬೇಕು, ಸ್ವಚ್ಛಾವಾಹಿನಿ ನೌಕರರಿಗೆ ಪಂಚಾಯಿತಿ ನೌಕರರೆಂದು ಪರಿಗಣಿಸಬೇಕು, ಪಂಚಾಯಿತಿ ನೌಕರರ ನಿವೃತ್ತಿ ನಂತರ ರೂ.10 ಲಕ್ಷ ಇಡಿಗಂಟು ಇಡಬೇಕು, 2ನೇ ಡಾಟಾ ಎಂಟ್ರಿ ಅಪರೇಟರ್ ನೇಮಕಾತಿ ಮಾಡಿಕೊಳ್ಳಲು ಅವಕಾಶ ಪ್ರತಿ ಗ್ರಾಮ ಪಂಚಾಯಿತಿಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಮಂಜೂರು ಮಾಡಲು ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಅಲ್ಲದೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು. ಕೆಲವು ಗ್ರಾ.ಪಂ ಗಳಲ್ಲಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಆದೇಶವಿದ್ದರೂ ನೇಮಿಸಿಕೊಳ್ಳುತ್ತಿಲ.್ಲ ಪಂಚಾಯಿತಿ ಸ್ವಚ್ಛಾತಾ ನೌಕರರು ಹಾಗೂ ಪಂಚಾಯಿತಿ ನೌಕರರನ್ನು ಖಾಯಂಗೊಳಿಸಲು ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಅವಕಾಶವಿದ್ದರೂ ಆದೇಶ ಪ್ರತಿಗಳಿಗೆ ಸಹಿ ಮಾಡಿರುವುದಿಲ್ಲ ಈ ಬಗ್ಗೆಯೂ ಮುಂದಿನ ವಾರದಲ್ಲಿ ಕಚೇರಿಯ ಮುಂದೆ ಪ್ರತಿಭಟನಾ ಹೋರಾಟ ನಡೆಸಲಾಗುವುದೆಂದು ಈ ಸಂದರ್ಭದ ಅವರು ಹೇಳಿದರು. ಸಂಘದ ಪ್ರಮುಖರಾದ ರಂಗಸ್ವಾಮಿ, ಗಾಯತ್ರಿ, ಮಣಿಕಂಠ, ಮುನಿಸ್ವಾಮಿ, ರಾಮಚಂದ್ರ, ವಿಶ್ವ, ರವಿ, ರಾಜ, ಮುರುಗೇಶ್, ರಮೇಶ ಹಾಗೂ ಚಂದ್ರಮಣಿ ಪಾಲ್ಗೊಂಡಿದ್ದರು.











