ಸುಂಟಿಕೊಪ್ಪ ಡಿ.20 NEWS DESK : ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಆವರಣದಲ್ಲಿ ನೂತನವಾಗಿ ಅಂದಾಜು ರೂ.15 ರಿಂದ 18 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮುಖಮಂಟಪವು(ತೀರ್ಥ) ಡಿ.25 ರಂದು ಲೋಕಾರ್ಪಣೆಗೊಳಿಸಲಾಗುವುದೆಂದು ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಎಂ.ಸುರೇಶ್ ತಿಳಿಸಿದ್ದಾರೆ. ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರವು 1992 ಮೇ 8 ರಂದು ಸ್ಥಾಪನೆಗೊಂಡ ನಂತರದ ದಿನಗಳಲ್ಲಿ ದೇವಾಲಯದ ಆವರಣದಲ್ಲಿ ಶ್ರೀ ಅಯ್ಯಪ್ಪಸ್ವಾಮಿ, ಶ್ರೀಕನ್ನಿಮೂಲ ಗಣಪತಿ, ಹಾಗೂ ನೈವೇದ್ಯ ಕೊಠಡಿ ಮತ್ತು ದೇವಸ್ಥಾನದ ಕಚೇರಿ ನಿರ್ಮಿಸಲಾಗಿತ್ತು. ಅದರಂತೆ ಕಳೆದ ವರ್ಷ ದುರ್ಗಾ ದೇವಿಯ ದೇವಸ್ಥಾನವನ್ನು ಬಿ.ಎಂ.ಸುರೇಶ್ ನೇತೃತ್ವದ ದೇವಸ್ಥಾನ ಆಡಳಿತ ಮಂಡಳಿ ತಂಡವು ದೇವಾಲಯವನ್ನು ನಿರ್ಮಿಸಿ ಜೀರ್ಣೊದ್ಧಾರಗೊಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಈ ಬಾರೀ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ತೀರ್ಥ ಮಂಟಪದ ಅವಶ್ಯಕತೆಯನ್ನು ಮನಗಂಡ ಬಿ.ಎಂ.ಸುರೇಶ್ ಆಡಳಿತ ಮಂಡಳಿಯವರು ನಿರ್ಮಿಸುವ ಕಾರ್ಯಕ್ಕೆ ಮುಂದಾಗಿ ಊರಿನ ದಾನಿಗಳು, ಭಕ್ತಾದಿಗಳು ಸೇರಿದಂತೆ ಸುತ್ತ ಮುತ್ತಲಿನ ದಾನಿಗಳ ಸಹಾಯದಿಂದ ಸರಿಸುಮಾರು ಅಂದಾಜು ರೂ. 15 ರಿಂದ 18 ಲಕ್ಷ ವೆಚ್ಚದಲ್ಲಿ ಮುಖಮಂಟಪವನ್ನು ನಿರ್ಮಾಣ ಕಾರ್ಯವು ಪೂರ್ಣಗೊಂಡಿದೆ. ದೇವಸ್ಥಾನ ಸಮಿತಿ ಬಿ.ಎಂ.ಸುರೇಶ್ ಅವರು ತಿಳಿಸಿದರು. ಈ ಬಾರೀ ನೂತನವಾಗಿ ನಿರ್ಮಿಸಲಾಗಿರುವ ಮುಖ ಮಂಟಪವನ್ನು ಕಳೆದ 6 ತಿಂಗಳ ಹಿಂದೆ ಪುತ್ತೂರಿನ ಜಗನಿವಾಸ್ ರಾವ್ ರವರು ಭೂಮಿ ಪೂಜೆ ಶಿಲಾನ್ಯಾಸವನ್ನು ನೇರವೇರಿಸಿದರು. ಪುತ್ತೂರಿನ ಶಿಲ್ಪಿಗಳಾದ ಕೃಷ್ಣಪ್ರಸಾದ್ ರವರು ಶಿಲ್ಪಿ ಕಾರ್ಯವನ್ನು ನಿರ್ವಹಿಸುವ ಮೂಲಕ ಕ್ಷೇತ್ರದಲ್ಲಿ ಬಲು ಸುಂದರವಾಗಿ ಗೋಚರಿಸುತ್ತಿದ್ದು, ಲೋಕಾರ್ಪಣೆಗೊಳಿಸಲು ಸನ್ನದವಾಗಿದೆ. ಡಿ.24 ರಂದು ಸಂಜೆ 6 ಗಂಟೆಗೆ ಕೇರಳದ ತಳಿಪರಂಬ ಕಾಳೇಘಾಟ್ ಇಲ್ಲಂ ಮಧುಸೂಧನ್ ತಂತ್ರಿ ಅವರ ನೇತೃತ್ವದಲ್ಲಿ ಅಚಾರ್ಯ ತಂತ್ರಿಯವರನ್ನು ಸ್ವೀಕಾರ ಮಾಡುವುದರೊಂದಿಗೆ 6.30 ಗಂ ಟೆಗೆ ಪ್ರಾಶಬ್ಧ ಶುದ್ಧಿ, ರಾತ್ರಿ 7 ಗಂಟೆಗೆ ರಾಕ್ಷೋಘ್ನ ಹೋಮ, ಹಾಗೂ ಮುಖ ಮಂಖಟಪ ಸರ್ಮಪಣೆ ರಾತ್ರಿ 8 ಗಂಟೆಗೆ ವಾಸ್ತು ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ಅತ್ತಾಯ ಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ. ಡಿ.25 ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ, 8 ಗಂಟೆಗೆ ಕಳಸಪೂಜೆ, 10 ಗಂಟೆಗೆ ದುರ್ಗಾ ಲಕ್ಷ್ಮಿಗೆ ಕಲಶಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಪೂಜೆ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ. ದುರ್ಗಾ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಅಂಗವಾಗಿ ವೈದಿಕ ಧಾರ್ಮಿಕ, ವಿಧಿ ವಿಧಾನ ಕಾರ್ಯಕ್ರಮಗಳು ನಡೆಯಲಿದೆ. ಡಿ.27 ರಂದು ಮಂಡಲಪೂಜೆಯ ಅಂಗವಾಗಿ ಪೂರ್ವಾಹ್ನ 6.45 ಗಂಟೆಗೆ ಗಣಪತಿ ಹೋಮ, 7.10 ಗಂ. ಕನ್ನಿಮೂಲ ಗಣಪತಿಗೆ ಎಳೆನೀರು ಅಭಿಷೇಕ, 7.30 ಗಂಟೆಗೆ ಚಂಡೆಮೇಳ, 9. ಗಂಟೆಗೆ ಶ್ರೀ ಅಯ್ಯಪ್ಪಸ್ವಾಮಿಗೆ ಪಂಚಾಮೃತಾಭಿಷೇಕ,11.30 ಗಂ.ಶ್ರೀ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ, 12.30 ಗಂ.ಶ್ರೀ ಅಯ್ಯಪ್ಪಸ್ವಾಮಿಗೆ ಪಲ್ಲಪೂಜೆ, 1 ಗಂಟೆಗೆ ಮಹಾಪೂಜೆ ಮತ್ತು ಗಂಭೀರ ಪಟಾಕಿ,ನೇರೆದಿರುವ ಭಕ್ತಾಧಿಗಳಿಗೆ ಮಧ್ಯಾಹ್ನ 1 ರಿಂದ 4 ರವರೆಗೆ ಅನ್ನ ಸಂತರ್ಪಣೆ ನಡೆಯಲಿದೆ. ದಿನದ ವಿಶೇಷ ಪೂಜೆಯಾಗಿ ಬಿಲ್ವಪತ್ರೆ, ತುಳಸಿ ಆರ್ಚನೆ, ಪಂಚಾಮೃತ ಅಭಿಷೇಕ ಹಾಗೂ ದುರ್ವಾಚನೆ ನಡೆಸಲಾಗುವುದು. ಶ್ರೀಪುರಂ ಅಯ್ಯಪ್ಪ ಕ್ಷೇತ್ರದಲ್ಲಿ ವಿಶೇಷವಾಗಿ ಸಂಜೆ 6.30 ಗಂಟೆಗೆ ದೀಪಾರಾಧನೆ ಮತ್ತು ಮೆರವಣಿಗೆ 7.30 ಗಂಟೆಗೆ ದುರ್ಗಾಪೂಜೆ ನಂತರ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಅಧ್ಯಕ್ಷ ಸುರೇಶ್ ಹಾಗೂ ಕಾರ್ಯದರ್ಶಿ ಎಂ.ಚಂದ್ರ ತಿಳಿಸಿದ್ದಾರೆ. ಅನಿಸಿಕೆ: ಕಳೆದ 3 ವರ್ಷಗಳಿಂದ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಆಡಳಿತ ಮಂಡಳಿ, ಹಿರಿಯರ ಮಾರ್ಗದರ್ಶನದೊಂದಿಗೆ ದಾನಿಗಳ ಹಾಗೂ ಭಕ್ತಾಧಿಗಳ ನೆರವಿನೊಂದಿಗೆ ದೇವಾಲಯದಲ್ಲಿ ಹಂತ ಹಂತವಾಗಿ ನಿರ್ಮಾಣ ಹೊಂದಿವೆ. ಅದೇ ರೀತಿಯಲ್ಲಿ ಕಳೆದ ತಾನು ಕಂಡಿದ ದುರ್ಗಾ ಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಮತ್ತು ಲೋಕಾರ್ಪಣೆಗೊಳಿಸಲು ಸಾಕಷ್ಟು ನೇರವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ್ದನ್ನು ಸ್ಮರಿಸಿದರು. ಈ ಬಾರೀ ಮುಖ ಮಂಟಪವನ್ನು ನಿರ್ಮಿಸುವ ಇರಾದೆ ಹೊಂದಿದ ಸಂದರ್ಭ ಹಿರಿಯರು, ದಾನಿಗಳು ಹಾಗೂ ಭಕ್ತಾಧಿಗಳು ತುಂಬು ಹೃದಯದ ನೆರವು ಸಹಕಾರಗಳನ್ನು ನೀಡಿದ್ದರಿಂದ 6 ತಿಂಗಳಿನಲ್ಲಿ ಶೀಘ್ರವಾಗಿ ಕಾಮಗಾರಿ ನಿರ್ವಹಿಸಿ ಲೋಕಾರ್ಪಣೆಗೆ ಸನ್ನದಗೊಂಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಎಲ್ಲಾ ರೀತಿಯ ಸಹಕಾರ ನೀಡಿದ ಸರ್ವರನ್ನು ಸ್ಮರಿಸುವುದಾಗಿ ಅವರುಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಂ.ಸುರೇಶ್ ಹೇಳಿದರು. ಸುಂಟಿಕೊಪ್ಪದ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರವು ಸಾಕಷ್ಟು ಪ್ರಸಿದ್ಧಿಯನ್ನು ಪಡೆಯುತ್ತಿದ್ದು ಈ ಕ್ಷೇತ್ರದಲ್ಲಿ ಶ್ರೀಅಯ್ಯಪ್ಪ ಸ್ವಾಮಿ, ಕನ್ನಿಮೂಲ ಗಣಪತಿ, ಶ್ರೀದುರ್ಗಾ ಲಕ್ಷ್ಮೀ ಸನ್ನಿಧಿಗಳಿದ್ದು ಮುಂದಿನ ಯೋಜನೆಯಾಗಿ ನಾಗಾಲಯ ಮಾಡುವ ಇರಾದೆಯನ್ನು ಹೊಂದಿದ್ದೇವೆ ಭಕ್ತಾಧಿಗಳು ಹಾಗೂ ದಾನಿಗಳು ತನು ಮನ ಧನ ಸಹಾಯವನ್ನು ನೀಡಿ ನಮ್ಮೊಂದಿಗೆ ಕೈ ಜೋಡಿಸುವಂತೆ ಶ್ರೀ ಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಕಾರ್ಯದರ್ಶಿ ಎಂ.ಚಂದ್ರ ಕೋರಿದ್ದಾರೆ.










