ಕೊಡಗು ವಿಶ್ವ ಹಿಂದೂ ಪರಿಷದ್, ಬಜರಂಗದಳದಿಂದ 35 ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರ

23/10/2020

ಮಡಿಕೇರಿ ಅ.23 :  2020 ನೇ ಇಸವಿ ಪ್ರಪಂಚದ ಘಟಾನುಘಟಿ  ದೇಶಗಳೇ ಪತರುಗುಟ್ಟಿದ ವರ್ಷ. 2019 ರ ಕೊನೆಯಲ್ಲಿ ಹರಡಲಾರಂಬಿಸಿದ ಚೀನಾ ಮೂಲದ ಮಾರಕ ಖಾಯಿಲೆ ಹೆಮ್ಮಾರಿಯಾಗಿ ವಿಶ್ವದಾದ್ಯಂತ ಸರಿಸುಮಾರು 1 ಮಿಲಿಯನ್ (ಹತ್ತು ಲಕ್ಷ) ಕ್ಕೂ ಹೆಚ್ಚಿನ ಬಲಿ ಪಡೆದುಕೊಂಡಿದೆ. ಮಾರ್ಚ್ ತಿಂಗಳಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಮೊದಲ ಸಾವಿನೊಂದಿಗೆ ಭಾರತದಲ್ಲಿ ತನ್ನ ಕಬಂಧ ಬಾಹು ಹರಡಿಸಿದ ಕೋವಿಡ್ 19  ಸುಮಾರು 1 ಲಕ್ಷಕ್ಕೂ ಅಧಿಕ ಜೀವ ಬಲಿ ಪಡೆದಿದೆ. ಲಾಕ್ಡೌನ್ ಸೀಲ್ ಡೌನ್ ನಂತರ ಜನ ಸಾಮಾನ್ಯ ಜೀವನ ಶೈಲಿ ಮುಂದುವರೆಸಿದಂತೆ ಮರಣ ಪ್ರಕರಣಗಳು ಕೂಡ ಹೆಚ್ಚುತ್ತಲೇ ಇದೆ. ಲಸಿಕೆ ಲಭ್ಯವಾಗುವವರೆಗೆ ಇದೇ ಲಕ್ಷಣಗಳೇ ಗೋಚರಿಸುತ್ತಿದೆ. ಹೀಗೆ ದಾಖಲಾದ ಮರಣ ಪ್ರಕರಣಗಳಲ್ಲಿ ಮೊದ ಮೊದಲು ಕೆಲವು ಕಡೆ ನಡೆದ ಮೃತ ವ್ಯಕ್ತಿಯ ಅಂತ್ಯಕ್ರಿಯೆ ಇಡೀ ನಾಗರೀಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿತ್ತು. ಆದರೆ ಆ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲಾ. ಈಗ ಕೊಡಗಿನಲ್ಲಿ ಕೂಡ ಸುಮಾರು 65 ಮರಣ ಪ್ರಕರಣಗಳು ದಾಖಲಾಗಿವೆ. ಮೃತರ ಕುಟುಂಬಕ್ಕೆ ಕೋವಿಡ್ ವಿಷಮ ಪರಿಸ್ಥಿತಿಯಲ್ಲಿ ಮೃತ ದೇಹವನ್ನು ನೀಡದ ಸಂದರ್ಭದಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿ ಮೊದಲು ಕೊಡಗು ಜಿಲ್ಲೆಯ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮೃತರ ಅಂತ್ಯಸಂಸ್ಕಾರದಲ್ಲಿ ಕೈಜೋಡಿಸಲು ತೀರ್ಮಾನ ತೆಗೆದು ಕೊಂಡಿತು. ಅಲ್ಲಿಂದ ಆರಂಭ ಇಂದಿನ 35 ಅಂತ್ಯ ಸಂಸ್ಕಾರಗಳ ಹಾದಿ. ಜಿಲ್ಲಾಡಳಿತ ಕೂಡ ಸ್ವಯಂಸೇವಕರನ್ನು ಬಯಸಿದ್ದರಿಂದ ಇದನ್ನು ಸ್ವಾಗತಿಸಿ ಇದಕ್ಕಾಗಿ ತರಬೇತಿ ಏರ್ಪಡಿಸಲು ಸಹ ಕಾರ್ಯಪ್ರವೃತ್ತವಾಯಿತು. ಆದರೆ ತರಬೇತಿಗೂ ಮೊದಲು ಶಂಕಿತ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆಸಬೇಕಾದ ಅನಿವಾರ್ಯತೆ ಎದುರಾಗಿ, ಧೃತಿಗೆಡದ ಬಜರಂಗದಳ ಕಾರ್ಯಕರ್ತರು ಜಿಲ್ಲಾ ಸಂಯೋಜಕರ ನೇತೃತ್ವದಲ್ಲಿ ಅಗ್ನಿ ಸ್ಪರ್ಶ ನೀಡುವ ಮೂಲಕ ಅಂತ್ಯಕ್ರಿಯೆ ನಡೆಸಿದರು. ನಂತರ ಸುಮಾರು 45 ಮಂದಿ ಸ್ವಯಂ ಸೇವಕರ ನೋಂದಣಿಯೊಂದಿಗೆ ತರಬೇತಿ ಪಡೆದ ಕಾರ್ಯಕರ್ತರು ವಿಶ್ವ ಹಿಂದೂ ಪರಿಷದ್ ತಾಲ್ಲೂಕು ಅಧ್ಯಕ್ಷ ಸುರೇಶ್ ಮುತ್ತಪ್ಪ ಹಾಗೂ ಬಜರಂಗದಳದ ಜಿಲ್ಲಾ ಸಂಯೋಜಕ ಚೇತನ್ ನೇತೃತ್ವದಲ್ಲಿ 35 ಕೋವಿಡ್ ಸೋಂಕಿತ ವ್ಯಕ್ತಿಗಳ ಅಂತ್ಯ ಸಂಸ್ಕಾರ ನಡೆಸಿದೆ.ಮೊದ ಮೊದಲು 3-4 ಅಂತ್ಯ ಸಂಸ್ಕಾರಕ್ಕಾಗಿ ಜಿಲ್ಲಾಡಳಿತದ ಕ್ಯಾಮೆರಾ ಮೆನ್, ಪೊಲೀಸ್, ನಗರ ಸಭೆ ಸಿಬ್ಬಂದಿಗಳ ವ್ಯವಸ್ಥೆ ಮಾಡಿತ್ತು. ಆ ನಂತರದ ದಿನಗಳಲ್ಲಿ ಸ್ವಯಂ ಸೇವಕರೇ ಕಿಟ್ ದರಿಸಿ ಡೀಸೆಲ್ ತಂದಿರುವ ಉದಾಹರಣೆಗಳಿವೆ. ಅರಣ್ಯ ಇಲಾಖೆಯ ವತಿಯಿಂದ ಮೊದಲು ಸೌದೆ ವ್ಯವಸ್ಥೆ ಮಾಡಿತ್ತು. ಆದರೆ ನಂತರದ ದಿನಗಳಲ್ಲಿ ದಾನಿಗಳ ನೆರವಿನಿಂದ  ಹಾಗೂ ಸ್ವಂತ ತೋಟಗಳಿಂದ ಸೌದೆ ಹೊಂದಿಸುವ ಕಾರ್ಯವನ್ನೂ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾಡಿಕೊಂಡಿದೆ. ಏಕ ಕಾಲಕ್ಕೆ ಎರಡೆರಡು ಮರಣ ಪ್ರಕರಣ ಎದುರಿಸಿದ ಕಾರ್ಯಕರ್ತರು ಮುಂದೆ ವಿಶ್ವ ಹಿಂದೂ ಪರಿಷದ್ ತಾಲ್ಲೂಕು ಅಧ್ಯಕ್ಷ ಸುರೇಶ್ ಮುತ್ತಪ್ಪ ಹಾಗೂ ಬಜರಂಗದಳದ ಜಿಲ್ಲಾ ಸಂಯೋಜಕ ಚೇತನ್ ನೇತೃತ್ವದಲ್ಲಿ ಎರಡನೆಯ ಕಬ್ಬಿಣದ ಚಿತೆ ಯನ್ನು ಕೂಡ ಸೇವಾ ಕಾರ್ಯದಲ್ಲಿ ಮಾಡಿಕೊಂಡಿದೆ. ನಂತರ ಸಂಘಟನೆಯ ಮನವಿಗೆ ಸ್ಪಂದಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ರವರು ಇದಕ್ಕೆ ಬೇಕಾದ ಕಬ್ಬಿಣದ ಛಾವಣಿ ವ್ಯವಸ್ಥೆಯನ್ನು ತಕ್ಷಣವೇ ಮಾಡಿಕೊಟ್ಟಿರುತ್ತಾರೆ. ಇದಕ್ಕೆ ಅವರು ಅಭಿನಂದನಾರ್ಹರು. ಸಂಘಟನೆಯು ಧನ್ಯವಾದಗಳನ್ನು ಸಲ್ಲಿಸುತ್ತದೆ. ಇದುವರೆಗೆ ಬಜರಂಗದಳ ನೇತೃತ್ವದಲ್ಲಿ ನಡೆದ ಅಂತ್ಯ ಸಂಸ್ಕಾರವನ್ನು ಅಗ್ನಿ ಸ್ಪರ್ಶದ ಮೂಲಕವೇ ನಡೆಸಿರುವುದು ವಿಶೇಷ. ಅದಕ್ಕಾಗಿ ಜಿಲ್ಲೆಯಲ್ಲಿ ಪ್ರಥಮವಾಗಿ ಗ್ಯಾಸ್ ಸಿಲಿಂಡರ್ ಬ್ಲೋ ಗನ್  ಬಳಸಿ ಸೌದೆಯ ಚಿತೆ ಯನ್ನು ಉರಿಸಲಾಗುತ್ತಿದೆ.   ಸಂಬಂಧಿಗಳೇ ಮೃತ ವ್ಯಕ್ತಿಯ ಹತ್ತಿರ ಹೋಗದ ಈ ಸಂದರ್ಭದಲ್ಲಿ ವಸುಧೈವ ಕುಟುಂಬಕಂ ಸಿದ್ಧಾಂತದಲ್ಲಿ ಇಂದಿಗೆ 35 ಅಂತ್ಯಕ್ರಿಯೆಯನ್ನು ನಡೆಸಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕೊಡಗು ಜಿಲ್ಲೆ ಇದನ್ನು ಸೇವೆಯಾಗಿ ಸ್ವೀಕರಿಸಿದೆ. ಕಾರ್ಯದಲ್ಲಿ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿ*ಸೇವೆಯೆಂಬ ಯಜ್ಞದಲ್ಲಿ ಸಮಿತೆಯಂತೆ ಉರಿಯುವಾ* ಎಂದು ಘೋಷಿಸಿದೆ.

====================================
*ಕೋರೋನ ವಾರಿಯರ್ಸ್* (ಅಂತ್ಯ ಸಂಸ್ಕಾರ ತಂಡ)
1.ಚೇತನ್ ಕೆ.ಹೆಚ್ 2.ಸುರೇಶ್ ಮುತ್ತಪ್ಪ 3.ವಿನಯ್ ಕುಮಾರ್ 4.ಚರಣ್ ಶಾಂತಿನಿಕೇತನ 5.ಪವನ್ ಮಕ್ಕಂದೂರು 6. ದುರ್ಗೆಶ್ ಶಾಂತಿನಿಕೇತನ 7. ಸತ್ಯ ಕರ್ಕೇರ  8.ಜಗದೀಶ್ ಶಾಂತಿನಿಕೇತನ 9. ಸತೀಶ್ ರೈ ಶಾಂತಿನಿಕೇತನ 10. ಸುದರ್ಶನ್ ಶಾಂತಿನಿಕೇತನ 11. ರಾಜ ಉಡೋತ್ 12. ಪ್ರಜ್ವಲ್ 13. ವಿನಯ್ 14. ಗೌತಮ್ ಶಾಂತಿನಿಕೇತನ 15. ಅರುಣ್ ಶೆಟ್ಟಿ 16. ಗಿರೀಶ್ ಶಾಂತಿನಿಕೇತನ 17.  ಕುಟ್ಟಪ್ಪ ಮೂರ್ನಾಡು 18. ಮೋಹನ್ ಮೂರ್ನಾಡು 19. ಪ್ರವೀಣ್ ಮೂರ್ನಾಡು 20. ದಿನೇಶ್ ಮೂರ್ನಾಡು 21. ಮನು ಮಂಜುನಾಥ್ 22. ವೇಣು ಶಾಂತಿನಿಕೇತನ 23. ವಿನು ಶಾಂತಿನಿಕೇತನ 24. ಸಂಜೀವ್ ಮೂರ್ನಾಡು 25. ವೆಂಕಪ್ಪ ಮೂರ್ನಾಡು 26. ದಾಮೋದರ (ರಾಮು) 27. ಶಿವಮೂರ್ತಿ 28. ಮಹೇಶ್ ಆರ್ ಶಾಂತಿನಿಕೇತನ 29. ದರ್ಶನ್. ಶಾಂತಿನಿಕೇತನ30. ರವೀಂದ್ರ ಶಾಂತಿನಿಕೇತನ31. ಸುಕುಮಾರ್ ಪಿ.ಜಿ32. ಮುರುಗನ್33. ಬಿದ್ದಪ್ಪ ಮಕ್ಕಂದೂರು34. ಸತೀಶ್35.ಸುಮಂತ್ ಟಿ. ಆರ್
ಸೇವಾ ಕಾರ್ಯದಲ್ಲಿ (ಶ್ರಮದಾನ ಸೌದೆ ಹಾಗೂ ಚಿತೆ)1.ರವೀಂದ್ರ ,2.ಸದಾ ಶಾಂತಿನಿಕೇತನ,3.ಉಡೋತ್ತ್ ಕಿಶೋರ್,4.ಉಡೋತ್ತ್ ಜಯ, 5.ಉಡೋತ್ತ್ ಜೀವನ್, 6.ಉಡೋತ್ತ್ ಪ್ರಸಾದ್, 7.ತಿರುಮಲ,8.ವರುಣ್ ಶಾಂತಿನಿಕೇತನ9.ಕೇಶವ ಶಾಂತಿನಿಕೇತನ 10.ರಾಜೇಶ್ ಶಾಂತಿನಿಕೇತನ11.ರಮೇಶ್ ಶಾಂತಿನಿಕೇತನ12.ಅರುಣ್ ವೆಲ್ಡರ್
ಆಸ್ಪತ್ರೆಯ ಸಿಬ್ಬಂದಿ1. ರಾಬರ್ಟ್2.ಸಯ್ಯದ್3. ಪ್ರದೀಪ್ (ಆಂಬ್ಯುಲೆನ್ಸ್ ಚಾಲಕ)