ಮನವಿಗೆ ಸ್ಪಂದಿಸಿದ ಶಾಸಕ ಅಪ್ಪಚ್ಚುರಂಜನ್ : ಹಿಂದೂ ರುದ್ರಭೂಮಿಯ 2ನೇ ಚಿತಾಗಾರಕ್ಕೆ ಮೇಲ್ಚಾವಣಿ ಅಳವಡಿಕೆ

23/10/2020

ಮಡಿಕೇರಿ ಅ.23 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಾವಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಕೋವಿಡ್ ಮಾರ್ಗಸೂಚಿಯಂತೆ ಶವ ಸಂಸ್ಕಾರ ಮಾಡಲು ಜಿಲ್ಲಾಡಳಿತದೊಂದಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕೂಡ ಕೈಜೋಡಿಸಿದೆ.
ಮಡಿಕೇರಿಯ ಹಿಂದೂ ರುದ್ರಭೂಮಿಯಲ್ಲಿ ಸುಮಾರು 35 ಶವಗಳ ಸಂಸ್ಕಾರ ಮಾಡಿರುವ ಈ ಎರಡು ಸಂಘಟನೆಗಳ ಸ್ವಯಂ ಸೇವಕರು ಮತ್ತೊಂದು ಚಿತಾಗಾರವನ್ನು ಶ್ರಮದಾನದ ಮೂಲಕವೇ ನಿರ್ಮಿಸಿದ್ದಾರೆ. ಎರಡನೇ ಚಿತಾಗಾರಕ್ಕೆ ಮೇಲ್ಚಾವಣಿಯ ಅಗತ್ಯವಿದ್ದ ಕಾರಣ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು.
ತಕ್ಷಣ ಸ್ಪಂದಿಸಿದ ಶಾಸಕರು ನಾಲ್ಕೇ ದಿನಗಳಲ್ಲಿ ಮೇಲ್ಚಾವಣಿಯ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ನ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಎಸ್.ಸುರೇಶ್ ಮುತ್ತಪ್ಪ ಹಾಗೂ ಬಜರಂಗದಳದ ಜಿಲ್ಲಾ ಸಂಯೋಜಕ ಹೆಚ್.ಕೆ.ಚೇತನ್ ತಿಳಿಸಿದ್ದಾರೆ. ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೃತಜ್ಞತೆ ಸಲ್ಲಿಸಿದ್ದಾರೆ. ಶವ ಸಂಸ್ಕಾರದ ಸೇವಾಕಾರ್ಯ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.