ಶ್ರೇಷ್ಠ ಗಾಯಕ ಎಸ್.ಪಿ.ಬಿ.ಗೆ ಮಡಿಕೇರಿಯಲ್ಲಿ ಕಲಾವಿದರಿಂದ ಭಾವಪೂಣ೯ ಗೀತ ನಮನ

24/10/2020

ಮಡಿಕೇರಿ ಅ.24 : ಸಂಗೀತ ಸಾಮ್ರಾಜ್ಯದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಮೆರೆದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೋವ೯ ಪರಿಪೂಣ೯ ವ್ಯಕ್ತಿತ್ವದ ಶ್ರೇಷ್ಟ ಕಲಾವಿದ ಎಂದು ಹಿರಿಯ ಪತ್ರಕತ೯ ಜಿ.ಚಿದ್ವಿಲಾಸ್ ಹೇಳಿದ್ದಾರೆ.

ಮಡಿಕೇರಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾ ಭವನದಲ್ಲಿ ಕೂಗ್೯ ಸನ್ ರೈಸ್ ಮೆಲೋಡೀಸ್ ವತಿಯಿಂದ ಆಯೋಜಿತ ಪದ್ಮಶ್ರೀ ಎಸ್.ಪಿ.ಬಿ. ಗೀತ ನಮನ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ಚಿದ್ವಿಲಾಸ್, ದೇಶದ ಅನೇಕ ಖ್ಯಾತ ದಿಗ್ಗಜ ಸಂಗೀತಕಲಾವಿದರ ಸಾಲಿಗೆ ಸೇಪ೯ಡೆಯಾಗುವ ಅಹ೯ತೆ ಹೊಂದಿದ್ದ ಬಾಲಸುಬ್ರಹ್ಮಣ್ಯಂ ಸಹೃದಯಿ, ಸಜ್ಜನ ಮತ್ತು ಸಾತ್ವಿಕತೆಯ ಪ್ರತೀಕವಾಗಿ ಸಂಗೀತ ಲೋಕದಲ್ಲಿ ವಿಜ್ರಂಭಿಸಿದರು ಎಂದರು.

ಸಂಗೀತಗಾರನ ಜೀವಕ್ಕೆ ಸಾವಿರುತ್ತದೆಯೇ ವಿನಾ ಸಂಗೀತಗಾರ ಸೃಷ್ಟಿಸಿದ ಹಾಡುಗಳಿಗೆ ಸಾವಿಲ್ಲ ಎಂದೂ ಚಿದ್ವಿಲಾಸ್ ಸ್ಮರಿಸಿದರು.

ಮೈಸೂರಿನ ಸಾಹಿತ್ಯಕಾರ ಆರ್.ರವಿಕುಮಾರ್ ಮಾತನಾಡಿ, ತಾನು ಬರೆದ 27 ಗೀತೆಗಳ ಸಾಹಿತ್ಯಕ್ಕೆ ಎಸ್.ಪಿ.ಬಿ. ಧ್ವನಿ ನೀಡಿದ್ದು ತನ್ನಲ್ಲಿ ಸಾಥ೯ಕತೆ ಮೂಡಿಸಿದೆ ಎಂದರಲ್ಲದೇ, ಯಾವ ಕಲಾವಿದನಿಗೂ ಭಾರತೀಯರು ಎಸ್.ಪಿ.ಬಿ. ಗೆ ತೋರಿದಷ್ಟು ಪ್ರೀತಿ ತೋರಿರಲಿಲ್ಲ ಎಂದು ಶ್ಲಾಘಿಸಿದರು. ಅನೇಕ ವಿಚಾರಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದ ಎಸ್.ಪಿ.ಬಿ., ಕಿರಿಯರನ್ನೂ ತಿದ್ದಿತೀಡಿ ಬೆಳೆಸುತ್ತಿದ್ದರು. ದೇವರ ರೂಪದಂತೆ ಜೀವಿಸಿ ಸಾಥ೯ಕ ಬದುಕನ್ನು ಅವರು ಕಂಡರು ಎಂದು ಹೇಳಿದರು.

ಮೈಸೂರಿನ ಸಂಗೀತ ನಿದೇ೯ಶಕ ಮಹೇಶ್ ಕೋಟೆ ಮಾತನಾಡಿ, ಸಂಗೀತಗಾರನಿಗೆ ಎಸ್.ಪಿ.ಬಿ. ಅವರು ಚೈತನ್ಯದಾಯಿಯಂತೆ ಇದ್ದರು. ಅವರ ಅಗಲಿಕೆ ಸಂಗೀತ ಲೋಕಕ್ಕೇ ದೊಡ್ಡ ನಷ್ಟ ಎಂದು ವ್ಯಾಖ್ಯಾನಿಸಿದರು.

ಪತ್ರಕತ೯ ಅನಿಲ್ ಎಚ್.ಟಿ. ಮಾತನಾಡಿ, ಸಾಮಾನ್ಯವಾಗಿ ಯಾರಾದರೂ ನಿಧನರಾದಾಗ ಇವರ ಸಾವು ತುಂಬಲಾರದ ನಷ್ಟ ಎಂದು ಬರೆಯುತ್ತೇವೆ. ಆದರೆ ಎಸ್.ಪಿ.ಬಿ. ಸಾವು ನಿಜಕ್ಕೂ ದೇಶದ ಕಲಾರಂಗಕ್ಕೇ ದೊಡ್ಡ ನಷ್ಟ ಎಂದರಲ್ಲದೇ, ಗಾಯಕನಾಗಿ, ಕಲಾವಿದನಾಗಿ,ನಿಮಾ೯ಪಕನಾಗಿ, ಮಿಮಿಕ್ರಿ ಕಲಾವಿದನಾಗಿಯೂ ಎಸ್.ಪಿ.ಬಿ.ಯದ್ದು ಬಹುಮುಖ ವ್ಯಕ್ತಿತ್ವ ಎಂದು ಸ್ಮರಿಸಿಕೊಂಡರು.

ಭಾರತೀಯ ವಿದ್ಯಾಭವನದ ಕೊಡಗು ಜಿಲ್ಲಾ ಕಾಯ೯ದಶಿ೯ ಬಾಲಾಜಿ ಕಶ್ಯಪ್ ಮಾತನಾಡಿ, ತೆಲುಗು ಮಾತ್ರಭಾಷೆಯಾಗಿದ್ದರೂ ಕನ್ನಡದ ಅಭಿಮಾನದಿಂದ ಮುಂದಿನ ಜನ್ಮದಲ್ಲಿ ಕನ್ನಡನಾಡಿನಲ್ಲಿಯೇ ಹುಟ್ಟುವೆ ಎಂಬ ಹೇಳಿಕೆಗೆ ತೆಲುಗು ಭಾಷಿಕರು ಯಾವುದೇ ಟೀಕೆ ಮಾಡಲಿಲ್ಲ. ಇದು ಭಾಷಾ ಸೌಹಾದ೯ತೆಗೆ ನಿದಶ೯ನವಾಗಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ದೋಷಾರೋಪಣೆ ಮಾಡುವವರಿಗೆ ಇದು ಮಾದರಿಯಾಗಬೇಕೆಂದು ಹೇಳಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಆಡಳಿತಾಧಿಕಾರಿ ವಿದ್ಯಾಹರೀಶ್ ಮಾತನಾಡಿ, ಎಸ್.ಪಿ.ಬಿ.ಹಾಡು ಕೇಳುತ್ತಿದ್ದರೆ ಅವರು ಹಾಡುತ್ತಿದ್ದ ನಟರ ಸ್ಮರಣೆ ಮನಸ್ಸಿನ ಪಟದಲ್ಲಿ ಮೂಡಿಬರುವಂತಿರುತ್ತಿತ್ತು. ಅಂಥ ಸಾಧಕ ಗಾಯಕ ಅವರಾಗಿದ್ದರು ಎಂದು ಹೇಳಿದರು.

ಭಾರತೀಯ ವಿದ್ಯಾಭವನದ ಪ್ರಾಂಶುಪಾಲೆ ಕೆ.ಎಸ್.ಸುಮಿತ್ರಾ ಮಾತನಾಡಿ, ಈ ಕಾಯ೯ಕ್ರಮದ ಮೂಲಕ ಜಿಲ್ಲೆಯ ಕಲಾವಿದರಿಗೆ ವೇದಿಕೆ ನೀಡಿದ್ದು ಶ್ಲಾಘನೀಯ ಎಂದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಉಪಪ್ರಾಂಶುಪಾಲೆ ಕೆ. ವನಿತಾ ಚಂಗಪ್ಪ ಮಾತನಾಡಿ, ಎಸ್.ಪಿ.ಬಿ. ಅವರಲ್ಲಿದ್ದ ಸರಳ ಸಜ್ಜನಿಕೆಯ ಗುಣ ಎಲ್ಲರಿಗೂ ಸದಾ ಮಾದರಿಯಾಗಿದೆ ಎಂದು ಸ್ಮರಿಸಿಕೊಂಡರು.

ನಗರಸಭೆಯ ಮಾಜಿ ಸದಸ್ಯೆ ವೀಣಾಕ್ಷಿ ಮಾತನಾಡಿ ಮಡಿಕೇರಿಯಲ್ಲಿ ನಾಡಹಬ್ಬ ದಸರಾ ಸಾಂಸ್ಸೖತಿಕ ಕಾಯ೯ಕ್ರಮಗಳ ರಂಗು ತುಂಬಿಕೊಳ್ಳಬೇಕಾಗಿದ್ದ ಈ ದಿನಗಳಲ್ಲಿ ಕೋರೋನಾದಿಂದಾಗಿ ಎಲ್ಲಾ ಸಂಭ್ರಮವೂ ಮಂಕಾಗಿದೆ. ಇಂಥ ದಿನದಲ್ಲಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮ ನೆನಪಿಸುವಂತೆ ಕೂಗ್೯ ಸನ್ ರೈಸ್ ಮೆಲೋಡೀಸ್ ಶ್ರೇಷ್ಟ ಗಾಯಕನಿಗೆ ಗೀತ ನಮನ ಆಯೋಜಿಸಿದ್ದು ಶ್ಲಾಘನೀಯ ಎಂದು ಪ್ರಶಂಶಿಸಿದರು.

ಮುತ್ತಿನ ಹಾರ ವಾದ್ಯಗೋಷ್ಟಿ ಕಲಾವಿದರ ಸಂಘದ ಅಧ್ಯಕ್ಷ ಆನಂದ ಮಾತನಾಡಿ, ಜಿಲ್ಲೆಯ ಕಲಾವಿದರಿಗೆ ಸ್ಫೂರ್ತಿದಾಯಕರಾಗಿದ್ದ ಎಸ್.ಪಿ.ಬಿ. ಗೀತನಮನ ಅಥ೯ಪೂಣ೯ ಕಾಯ೯ಕ್ರಮ ಎಂದರು.

ಮುತ್ತಿನ ಹಾರ ವಾದ್ಯಗೋಷ್ಟಿ ಕಲಾವಿದರ ಸಂಘದ ಖಚಾಂಚಿ ರವಿ ಆರ್.ಶಾಸ್ತ್ರೀ ಮಾತನಾಡಿ, 30 ವಷ೯ಗಳ ಕಾಲ ಎಸ್.ಪಿ.ಬಿ. ಹಾಡುಗಳನ್ನೇ ಉಸಿರಾಗಿರಿಸಿಕೊಂಡು ಕಾಯ೯ಕ್ರಮ ಆಯೋಜಿಸುತ್ತಿದ್ದೆವು ಎಂದು ನೆನಪಿಸಿಕೊಂಡರು.

ಕಾಯ೯ಕ್ರಮದ ಆಯೋಜಕ ಕೂಗ್೯ ಸನ್ ರೈಸ್ ಮೆಲೋಡಿಸ್ ನ ಸಂಚಾಲಕ ಪಿ.ರವಿ ಮುಂದಿನ ದಿನಗಳಲ್ಲಿಯೂ ಕೊಡಗು ಜಿಲ್ಲೆಯ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಕಾಯ೯ಕ್ರಮ ಆಯೋಜಿಸುವುದಾಗಿ ಹೇಳಿದರು.

ಕಲಾವಿದೆ ಚಿತ್ರಾನಂಜಪ್ಪ ಪ್ರಾಥಿ೯ಸಿ, ಕಾವೇರಿ ಪಿ.ಎ.ಸ್ವಾಗತಿಸಿದ ಕಾಯ೯ಕ್ರಮದಲ್ಲಿ ಶ್ರೀನಿವಾಸ್ ವಂದಿಸಿದರು. ಜಿಲ್ಲೆಯ ಹಲವೆಡೆಗಳಿಂದ ಬಂದಿದ್ದ 30 ಕ್ಕೂ ಅಧಿಕ ಕಲಾವಿದರು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಹಾಡುಗಳನ್ನು ಹಾಡುವ ಮೂಲಕ ಅಗಲಿದ ಶ್ರೇಷ್ಟ ಗಾಯಕನಿಗೆ ಗೀತ ನಮನ ಸಲ್ಲಿಸಿದರು.