ಸೋಮೇಶ್ವರ ದೇವಾಲಯದಲ್ಲಿ ದುರ್ಗಾಷ್ಟಮಿ ಪ್ರಯುಕ್ತ ಶಕ್ತಿ ಪಾರ್ವತಿ ದೇವಿಗೆ ವಿಶೇಷ ಪೂಜೆ

October 24, 2020

ಸೋಮವಾರಪೇಟೆ ಅ. 24 : ದುರ್ಗಾಷ್ಟಮಿ ಅಂಗವಾಗಿ ನಗರದ ಸೋಮೇಶ್ವರ ದೇವಾಲಯದಲ್ಲಿ ದುರ್ಗಾ ಹೋಮ ನಡೆಯಿತು.
ನವರಾತ್ರಿ ಅಂಗವಾಗಿ ದೇವಾಲಯದ ಅರ್ಚಕರಾದ ಚಿತ್ರಕುಮಾರ್ ಭಟ್ಟ್ ನೇತೃತ್ವದಲ್ಲಿ ಅರ್ಚಕರ ತಂಡ ಹೋಮ ಪೂರ್ಣಹುತಿ ಕಾರ್ಯ ನೆರವೇರಿಸಿದರು.
ದೇವಾಲಯದ ಶಕ್ತಿ ಪಾರ್ವತಿ ದೇವಿಗೆ ವಿಶೇಷ ಅಲಂಕಾರ ದೊಂದಿಗೆ ಅರ್ಚನೆ, ಅಷ್ಟೋತ್ತರ, ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ನಡೆಯಿತು.