ಸೋಮವಾರಪೇಟೆಯಲ್ಲಿ ದಸರಾ ಹಬ್ಬಕ್ಕೆ ಮೆರುಗು ತಂದ ಗೊಂಬೆಗಳ ಪೂಜೆ

24/10/2020

ಸೋಮವಾರಪೇಟೆ ಅ. 24 : ಸೋಮವಾರಪೇಟೆ ಪಟ್ಟಣದ ಹಿರಿಯ ಕಾಫಿ ಬೆಳೆಗಾರ ಎಂ.ಪಿ ಶಂಕರಪ್ಪ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ನವ ರಾತ್ರಿಯಂದು ಗೊಂಬೆಗಳನ್ನಿರಿಸಿ ಪೂಜೆ ಸಲ್ಲಿಸಲಾಗುತಿದೆ.
ಕಳೆದ 30 ವರ್ಷಗಳಿಂದ ಶಾರದಶಂಕರಪ್ಪ ನವರಾತ್ರಿ ಸಂದರ್ಭದಲ್ಲಿ ಗೊಂಬೆಗಳು ಹಾಗೂ ನವದುರ್ಗೆಯರ ಮೂರ್ತಿ ಗಳನ್ನಿರಿಸಿ ಪ್ರತಿನಿತ್ಯ ಪೂಜೆ ಸಲ್ಲಿಸುತಿದ್ದು , 9 ದಿನಗಳು ವಿಶೇಷ ಪೂಜೆ ನಡೆಸುವುದರೊಂದಿಗೆ ದಸರಾ ಹಬ್ಬಕ್ಕೆ ಮೆರುಗು ತಂದಿದ್ದಾರೆ. ವಿಜಯದಶಮಿಯಂದು ಮಹಿಳೆಯರನ್ನು ಆಹ್ವಾನಿ ಅವರನ್ನು ಸತ್ಕರಿಸುವುದನ್ನು ನಡೆಸಿಕೊಂಡು ಬರುತಿದ್ದಾರೆ.