ಸುಂಟಿಕೊಪ್ಪದಲ್ಲಿ ದಸರಾ ಹಬ್ಬಕ್ಕೆ ನಡೆಯುತ್ತಿದೆ ಹೂವು, ಕಬ್ಬುಗಳ ವ್ಯಾಪಾರ

24/10/2020

ಸುಂಟಿಕೊಪ್ಪ,ಅ.24: ಸುಂಟಿಕೊಪ್ಪ ಪಟ್ಟಣದಲ್ಲಿ ಆಯುಧಪೂಜೆ ಹಾಗೂ ದಸಾರ ಹಬ್ಬದ ಪ್ರಯುಕ್ತ ಹೂ, ಹಣ್ಣು ಹಂಪಲು, ನಿಂಬೆಹಣ್ಣು, ಬಾಳೆ, ಕಬ್ಬು, ಬೂದು ಕುಂಬಳ ವ್ಯಾಪಾರ ಬಿರುಸಿನಿಂದ ನಡೆಯಿತು.
ಕೊವೀಡ್ 19 ಮಹಾಮಾರಿಯಿಂದ ಆಯುಧ ಪೂಜೆ ಹಾಗೂ ದಸಾರವನ್ನು ಸರಳವಾಗಿ ಆಚರಿಸಲು ಸರಕಾರ ನಿರ್ಧರಿಸಿದ್ದು, ಸರಕಾರ ಆದೇಶಿಸಿದ್ದರೂ ಕೆಲ ನಿರ್ಭಂಧಗಳನ್ನು ಹಾಕಿದ್ದರೂ ಆಯುಧಪೂಜಾ ವಿಧಿವಿಧಾನಗಳನ್ನು ಜನಸಾಮಾನ್ಯರು ಕಟ್ಟುನಿಟ್ಟಾಗಿ ಆಚರಿಸಲು ನಿರ್ಧರಿಸಿದ್ದಾರೆ. ವ್ಯಾಪಾರ ವಹಿವಾಟು ವಾಹನಗಳ ಅಲಂಕಾರವನ್ನು ಆಯುಧಪೂಜೆಗೆ ಬೇಕಾದ ಸಾಮಾಗ್ರಿಗಳನ್ನು ಜನದಟ್ಟಣೆಯಲ್ಲಿ ಖರೀದಿಸಿದರು.
ದೂರದ ಹಾಸ£,À ಕೊಣನೂರು,ಪಿರಿಯಾಪಟ್ಟಣ ಹೂಣಸೂರು, ಮೈಸೂರು, ಕುಶಾಲನಗರ ಕಡೆಗಳಿಂದ ಹೂಹಣ್ಣು ಪೂಜಾ ಸಾಮಾಗ್ರಿಗಳನ್ನು ವ್ಯಾಪಾರಸ್ಥರು ಜನತೆಯ ಬೇಡಿಕೆ ಮೀರಿ ತಂದಿದ್ದರು. ಆದರೆ ಕೊವೀಡ್ 19 ಹಿನ್ನಲೆ ಕುಂಠಿತವಾಗಿ ವ್ಯಾಪಾರ ವಹಿವಾಟು ಸಾಗಿತ್ತು.
ಪಟ್ಟಣದ ಆಯುಧಪೂಜಾ ಮುನ್ನ ದಿನವಾದ ಶನಿವಾರ ಹೆಚ್ಚಿನ ಪ್ರಮಾಣದಲ್ಲಿ ಜನದಟ್ಟನೆ ಕಂಡು ಬಂದಿತು.