ಸೋಮವಾರಪೇಟೆಯಲ್ಲಿ ದಸರಾ ಸಂಭ್ರಮ : ಗಗನಕ್ಕೇರಿದ ಹೂವಿನ ಬೆಲೆ

24/10/2020

ಸೋಮವಾರಪೇಟೆ ಅ. 24 : ಪ್ರಸಕ್ತ ವರ್ಷ ಕೋವಿಡ್-19 ಸೋಂಕು ಆಯುಧ ಪೂಜಾ ಸಂಭ್ರವನ್ನೇ ಕಸಿದುಕೊಂಡಿದೆ. ಪ್ರತಿವರ್ಷ ಪಟ್ಟಣದಲ್ಲಿ ಮೋಟರ್ ಯೂನಿಯನ್ ವತಿಯಂದ ಅದ್ಧೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅಯುಧ ಪೂಜೆಯ ದಿನದಂದು ಸುಮಾರು ಹತ್ತು ಸಾವಿರ ಮಂದಿಗೆ ಅನ್ನದಾನ ಮಾಡಲಾಗುತ್ತಿತ್ತು. ಹಗಲು ನೃತ್ಯ ಸ್ಪರ್ಧೆ, ರಾತ್ರಿ ಮನೋರಂಜನೆ ಕಾರ್ಯಕ್ರಮ, ವಕ್ರ್ಸ್‍ಶಾಪ್‍ಗಳಿಗೆ ಅಲಂಕಾರ ನಡೆಯುತ್ತಿತ್ತು. ಸಾವಿರಾರು ಮಂದಿ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಪ್ರಸಕ್ತ ವರ್ಷ ಸಾಂಕೇತಿಕವಾಗಿ ನಡೆಸಲಾಗುತ್ತಿದೆ.
ಗಗನಕ್ಕೇರಿದ ಹೂವಿನ ಬೆಲೆ:ಹೂವು, ಕುಂಬಳನ್ನು ಕೊಳ್ಳುವವರು ಕಡಿಮೆಯಿದ್ದರೂ, ಬೆಲೆ ಮಾತ್ರ ಗಗನಕ್ಕೇರಿತ್ತು. ಚಾಂದಿನಿ, ಸೆಂಟ್‍ವೈಟ್, ಚೆಂಡು ಹೂವಿಗೆ ಒಂದು ಮಾರಿಗೆ 100 ರೂ., ಗಳಿಗೆ ಮಾರಾಟವಾಯಿತು. ಅಕಾಲಿಕ ಮಳೆಯಿಂದ ಹೂವು ನಾಶವಾಗಿದ್ದು, ಈ ಕಾರಣದಿಂದ ಬೆಲೆ ಹೆಚ್ಚಾಗಿದೆ ಎಂದು ಹೂ ವ್ಯಾಪಾರಿ ಅಶೋಕ್ ಹೇಳಿದರು. ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ.25ರಷ್ಟು ವ್ಯಾಪಾರ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.