ಸಿದ್ದು ಧಮ್ ಇದ್ರೆ ಚಿದಂಬರಂ ಮುಂದೆ ಮಾತನಾಡಲಿ : ನಳಿನ್ ಕುಮಾರ್ ಕಟೀಲ್ ತಿರುಗೇಟು

October 24, 2020

ಮಡಿಕೇರಿ ಅ.24 : ನನ್ನ ಧಮ್ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ಧಮ್ ಇದ್ದರೆ ಪಿ.ಚಿದಂಬರಂ ಅವರ ಮುಂದೆ ನಿಂತು ಮಾತನಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸ್ಕಾರ ಮತ್ತು ಸಂಸ್ಕøತಿಯನ್ನು ಮುಂದಿಟ್ಟುಕೊಂಡು ಮಾತನಾಡಲು ಸಿದ್ದರಾಮಯ್ಯ ಅವರು ಕಲಿಯಲಿ ಎಂದರು.
ಜನರು ಬಿಜೆಪಿ ಪರ ಇದ್ದು ಶಿರಾ ಹಾಗೂ ರಾಜರಾಜೇಶ್ವರಿ ನಗರ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊರೋನಾ ಲಸಿಕೆ ಬಂದಾಗ ಆತ್ಮನಿರ್ಭರ್ ಭಾರತ್ ಯೋಜನೆಯಡಿಯಲ್ಲಿ ಯಾವ ರಾಜ್ಯಗಳಿಗೆ ಹೇಗೆ ತಲುಪಿಸಬೇಕೋ ಹಾಗೆ ತಲುಪಿಸಲಾಗುತ್ತದೆ. ಕೇಂದ್ರ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.