ಕೊಟ್ಟಿಗೆಯಲ್ಲಿ ಕಟ್ಟಿದ್ದ ಕೋಣಗಳ ಅಪಹರಣಕ್ಕೆ ಯತ್ನ

27/10/2020

ಮಡಿಕೇರಿ ಅ.27 : ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕೋಣಗಳನ್ನು ಅಪಹರಿಸಿರುವ ಪ್ರಕರಣ ಮಂಕ್ಯ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸೂರ್ಲಬ್ಬಿ ನಾಡಿನ ಕುಂಬಾರಗಡಿಗೆ ಗ್ರಾಮದ ಕನ್ನಿಗಂಡ ಎಂ.ಬಿದ್ದಪ್ಪ ಎಂಬವರು ತಮ್ಮ ಕೋಣಗಳನ್ನು ಮಂಕ್ಯ ಗ್ರಾಮದ ಮೇದುರ ದಿ. ಕುಶಾಲಪ್ಪ ಅವರ ಮನೆಯ ಹತ್ತಿರ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಬಂದಿದ್ದರು.
ಆದರೆ ಬೆಳಗ್ಗೆ ಬಂದು ನೊಡುವ ಹೊತ್ತಿಗೆ ಕೋಣಗಳು ನಾಪತ್ತೆಯಾಗಿರುವುದು ಕಂಡುಬಂದಿದೆ.
ಬಳಿಕ ಹುಡುಕಾಟ ನಡೆಸಿದಾಗ ಒಂದು ಕಿ.ಮೀ. ದೂರದಲ್ಲಿ ಕೋಣಗಳನ್ನು ಕಟ್ಟಿ ಹಾಕಿರುವುದು ಗೋಚರಿಸಿದ್ದು, ಕೋಣಗಳನ್ನು ಕದ್ದು ಮಾರಾಟ ಮಾಡಲು ಯತ್ನಿಸಿದ ಕಿಡಿಗೇಡಿಗಳು ಕೋಣಗಳನ್ನು ಗ್ರಾಮದಿಂದ ಹೊರಗೆ ತರಲಾಗದ ಹಿನ್ನೆಲೆಯಲ್ಲಿ ಅಲ್ಲೇ ಕಂಬಕ್ಕೆ ಕಟ್ಟಿ ಪರಾರಿಯಾಗಿಬೇಕೆಂದು ಶಂಕಿಸಲಾಗಿದೆ.
ಈ ಹಿಂದೆ ಕೋಣಗಳಿಗೆ ವಿಷ ಪದಾರ್ಥಗಳನ್ನು ಬೆರೆಸಿ ಕೊಲ್ಲುವ ಯತ್ನಿಸಿದ್ದ ಘಟನೆಯೂ ನಡೆದಿದ್ದು, ಬಿದ್ದಪ್ಪ ಅವರ ವಿರುದ್ಧ ಅಲ್ಲಿನ ಕೆಲವರು ಉದ್ದೇಶಪೂರ್ವಕವಾಗಿ ಇಂತಹ ಕೃತ್ಯಗಳಲ್ಲಿ ತೊಡಗಿರುವ ಬಗ್ಗೆ ಸಂಶಯ ಮೂಡಿದೆ.