ಮಹಿಳೆಯರಿಗೆ ಕಿರುಕುಳ : ಎಸ್‍ಐ ಬಂಧನ

27/10/2020

ನವದೆಹಲಿ ಅ.27 : ರಸ್ತೆಯಲ್ಲಿ ನಿಂತಿದ್ದ ಐವರು ಮಹಿಳೆಯರ ಜೊತೆ ಅಸಭ್ಯವಾಗಿ ನಡೆದುಕೊಂಡು ಕಿರುಕುಳ ನೀಡಿದ ಆರೋಪದಡಿಯಲ್ಲಿ ದೆಹಲಿ ಪೊಲೀಸರು ಸಬ್ ಇನ್ಸ್‍ಸ್ಪೆಕ್ಟರ್ ಒಬ್ಬರನ್ನು ಬಂಧಿಸಿದ್ದಾರೆ.
ಪುನಿತ್ ಗ್ರೋವಲ್ ಬಂಧಿತ ಸಬ್ ಇನ್ಸ್‍ಸ್ಪೆಕ್ಟರ್. ಕಳೆದ ಕೆಲವು ದಿನಗಳಿಂದ ದೆಹಲಿಯ ದ್ವಾರಕಾ ನಗರದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ಓರ್ವ ನಡೆದುಕೊಳ್ಳುತ್ತಿರುವ ಬಗ್ಗೆ ಕೆಲವರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮೌಖಿಕ ದೂರು ಸಲ್ಲಿಸಿದ್ದರು. ಘಟನೆ ಸಂಬಂಧ ತನಿಖೆಗಿಳಿದ ಪೊಲೀಸರು ಸ್ಥಳೀಯ 200ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ದೃಶ್ಯದಲ್ಲಿ ನಂಬರ್ ಪ್ಲೇಟ್ ಇಲ್ಲದ ಬೂದು ಬಣ್ಣದ ಕಾರು ಪತ್ತೆಯಾಗಿತ್ತು. ಕಾರ್ ಮಾಲೀಕನೇ ಎಸ್‍ಐ ಪುನೀತ್ ವಿಷಯ ಗೊತ್ತಾಗುತ್ತಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 354 ಡಿ, 354 ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.