ನ.1 ರಂದು ವೇತನ ಸಹಿತ ರಜೆ ನೀಡಲು ಸೂಚನೆ

October 27, 2020

ಮಡಿಕೇರಿ ಅ.27 : ಕರ್ನಾಟಕ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಹಬ್ಬ ಮತ್ತು ಹರಿದಿನಗಳ) ಕಾಯ್ದೆ 1963ರ ಕಲಂ 3 ಹಾಗೂ ಕರ್ನಾಟಕ ನಿಯಮಗಳು 1964ರ ನಿಯಮ 9ರ ಮೇರೆಗೆ ಕೊಡಗು ಜಿಲ್ಲೆಯಾದ್ಯಂತ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಹೋಟೆಲ್, ರೆಸ್ಟೋರೆಂಟ್‍ಗಳು, ರೆಸಾರ್ಟ್‍ಗಳು, ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು, ಪ್ಲಾಂಟೇಷನ್‍ಗಳು ಹಾಗೂ ಇತರೆ ಸಂಸ್ಥೆಗಳು ನ. 1 ಕನ್ನಡ ರಾಜ್ಯೋತ್ಸವ ದಿನದಂದು ಕಡ್ಡಾಯವಾಗಿ ತಮ್ಮಲ್ಲಿ ಕೆಲಸ ಮಾಡುವ ನೌಕರರಿಗೆ ವೇತನ ಸಹಿತ ರಜೆ ನೀಡಲು ಸೂಚಿಸಿದೆ.
ತಪ್ಪಿದಲ್ಲಿ ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆಗಾಗಿ ಸಂಬಂಧಿಸಿದವರ ವಿರುದ್ಧ ಕಾಯ್ದೆ ಮತ್ತು ನಿಯಮಗಳಡಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಅಧಿಕಾರಿ ಅವರು ತಿಳಿಸಿದ್ದಾರೆ.