ಬೊಮ್ಮಾಡು ಹಾಡಿಯಲ್ಲಿ ಬಿಜೆಪಿ ಬೂತ್ ಸಮಿತಿ ರಚನೆ
27/10/2020

ಮಡಿಕೇರಿ ಅ.27 : ನಾಲ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಮ್ಮಾಡು ಹಾಡಿಯಲ್ಲಿ ಇಂದು ಬಿಜೆಪಿ ಬೂತ್ ಸಮಿತಿ ರಚನೆ ಮಾಡಲಾಯಿತು.
ವಿರಾಜಪೇಟೆ ಕ್ಷೇತ್ರದ ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕ ಸಚಿನ್ ಪೆಮ್ಮಯ್ಯ ಚಿರಿಯಪಂಡ, ನಾಲ್ಕೇರಿ ಶಕ್ತಿ ಕೇಂದ್ರ ಪ್ರಮುಖ್ ಅನೀಶ್ ನಾಚಪ್ಪ ಕಳ್ಳಂಗಡ, ಸಹ ಪ್ರಮುಖ್ ಮನು ಮಾದಪ್ಪ ತೀತಿರ, ತಾಲೂಕು ಯುವಮೋರ್ಚಾ ಉಪಾಧ್ಯಕ್ಷ ನಾಚಪ್ಪ ಮಲ್ಲಪನೇರ, ಬೂತ್ ಅಧ್ಯಕ್ಷ ಜಗದೀಶ್ ಅಲ್ಲುಮಾಡ, ಒಬಿಸಿ ಅಧ್ಯಕ್ಷ ಕಿಶನ್ ಪೂಜಾರಿ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬೋಪಣ್ಣ ದೇಯಂಡ, ಸಾಮಾಜಿಕ ಜಾಲತಾಣ ಸದಸ್ಯ ಗಿರೀಶ್ ಅಲ್ಲುಮಾಡ, ಕಾನೂರು ಕೃಷಿ ಮೋರ್ಚಾ ಅಧ್ಯಕ್ಷ ನಿಖಿಲ್ ಕಾಳಪ್ಪ ಚಿರಿಯಪಂಡ, ಕೇಚಮಾಡ ಸಚಿನ್, ಹಿಂದೂ ಜಾಗರಣ ವೇದಿಕೆ ನಾಲ್ಕೇರಿ ಪ್ರಮುಖ್ ಗಿರೀಶ್ ಕಳ್ಳೆಂಗಡ ಹಾಗೂ ಬೊಮ್ಮಾಡು ಹಾಡಿ ನಿವಾಸಿಗಳು ಹಾಜರಿದ್ದರು.