18 ಮಂದಿಯನ್ನು ಉಗ್ರರೆಂದು ಘೋಷಣೆ

ನವದೆಹಲಿ ಅ.2 : ಭಯೋತ್ಪಾದನೆ ವಿರೋಧಿ ಕಾನೂನಿನಡಿ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಮುಖ್ಯಸ್ಥ ಸೈಯದ್ ಸಲ್ಲಾಹುದ್ದೀನ್ ಮತ್ತು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸ್ಥಾಪಕರಾದ ಭಟ್ಕಳ ಸಹೋದರರು ಸೇರಿದಂತೆ 18 ಮಂದಿಯನ್ನು ಉಗ್ರರೆಂದು ಘೋಷಿಸಲಾಗಿದೆ ಎಂದು ಅಧಿಕೃತ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.
199ರಲ್ಲಿ ನಡೆದಿದ್ದ ಇಂಡಿಯನ್ ಏರ್ ಲೈನ್ಸ್ ಅಪಹರಣಕಾರರಾದ ಅಬ್ದುಲ್ ರವೂಫ್ ಅಸ್ಗಾರ್, ಇಬ್ರಾಹಿಂ ಅಥರ್ ಮತ್ತು ಯೂಸಫ್ ಅಜಾರ್ ಕೂಡಾ ಈ ಪಟ್ಟಿಯಲ್ಲಿದ್ದಾರೆ.
ಮುಂಚೆ ಉಗ್ರ ಸಂಘಟನೆಗಳನ್ನು ಮಾತ್ರ ಕಠಿಣ ಕಾನೂನಿನಡಿ ಸೇರಿಸಲಾಗುತಿತ್ತು. ವ್ಯಕ್ತಿಗಳನ್ನು ಸೇರಿಸುತ್ತಿರಲಿಲ್ಲ. ಆದರೆ, ಕಳೆದ ವರ್ಷ ಆಗಸ್ಟ್ ನಲ್ಲಿ ಸಂಸತ್ ಉಗ್ರ ವಿರೋಧಿ ಕಾಯ್ದೆಗೆ ತಿದ್ದುಪಡಿ ತಂದು, ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಥವಾ ಪೋತ್ಸಾಹ, ಉತ್ತೇಜಿನ ರೀತಿಯ ಚಟುವಟಿಕೆಗಳಲ್ಲಿ ನಡೆಸುವವರನ್ನು ಉಗ್ರರೆಂದು ಘೋಷಿಸಲು ವಿನಾಯಿತಿ ನೀಡಲಾಗಿದೆ.
ಈ ತಿದ್ದುಪಡಿ ನಂತರ ಕೇಂದ್ರ ಸರ್ಕಾರ 2019 ರ ಸೆಪ್ಟೆಂಬರ್‍ನಲ್ಲಿ ನಾಲ್ಕು ವ್ಯಕ್ತಿಗಳನ್ನು ಮತ್ತು 2020 ರ ಜುಲೈನಲ್ಲಿ ಒಂಬತ್ತು ಜನರನ್ನು ಭಯೋತ್ಪಾದಕರಾಗಿ ಘೋಷಿಸಿದೆ. ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಬದ್ಧತೆ ಮೂಲಕ ಮೋದಿ ಸರ್ಕಾರ ಇಂದು ಭಯೋತ್ಪಾದಕ ವಿರೋಧಿ ಕಾನೂನಿನ ನಿಬಂಧನೆಗಳ ಪ್ರಕಾರ ಇನ್ನೂ 18 ಜನರನ್ನು ಭಯೋತ್ಪಾದಕರಾಗಿ ಘೋಷಿಸಿದೆ” ಎಂದು ವಕ್ತಾರರು ತಿಳಿಸಿದ್ದಾರೆ.
