“ಕೋವಿಡ್” ಕವನ ಸ್ಪರ್ಧೆ : ನ. 15 ರಂದು ವಿಜೇತರಿಗೆ ಬಹುಮಾನ ವಿತರಣೆ

October 28, 2020

ಮಡಿಕೇರಿ ಅ. 28 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದಿಂದ ಪ್ರಸ್ತುತ ಸಾಲಿನ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಆಯೋಜಿಸಿದ “ಕೋವಿಡ್” ಕವನ ಸ್ಪರ್ಧೆಯ ವಿಜೇತರ ಹೆಸರನ್ನು ಪ್ರಕಟಿಸಲಾಗಿದ್ದು, ನ. 15 ರಂದು ಬಹುಮಾನ ವಿತರಿಸಲಾಗುವುದೆಂದು ಸಂಘದ ಗೌರವ ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ ತಿಳಿಸಿದ್ದಾರೆ.
ಸಂಘದ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕವನ ಸ್ಪರ್ಧೆಯನ್ನು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ಮುಂದಾಳತ್ವದಲ್ಲಿ ಆಯೋಜಿಸಲಾಗಿತ್ತು.
ಕೋವಿಡ್ ವಿಷಯದ ಕುರಿತು ಆನ್‍ಲೈನ್‍ನಲ್ಲಿ ಆಯೋಜಿಸದ ಸ್ಪರ್ಧೆಗೆ 37 ಅತ್ಯುತ್ತಮ ಕವನಗಳು ಬಂದಿದ್ದು, 7 ಕವನಗಳನ್ನು ಮಾತ್ರ ಬಹುಮಾನ ನೀಡಲು ಆಯ್ಕೆಯಾಗಿವೆ. ಈ ಬಹುಮಾನಗಳನ್ನು ನ. 15 ರಂದು ನಡೆಯಲಿರುವ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟದಲ್ಲಿ ನೀಡಲಾಗುವುದು.

ವಿಜೇತ ವಿದ್ಯಾರ್ಥಿಗಳು : ಪ್ರಥಮ ಸ್ಥಾನವನ್ನು ಎಲ್. ವೈ ದಿಲೀಪ್ (ಕನ್ನಡ) ಪಡೆದುಕೊಂಡಿದ್ದು, ದ್ವೀತಿಯ ಬಹುಮಾನವನ್ನು ಎಸ್.ಎಂ ರಚನ (ಕನ್ನಡ), ಜಿ.ಎಂ ವೇದಶ್ರೀ ಜಿ.ಎಂ (ಕನ್ನಡ) , ಸಿ.ಟಿ.ಯಶಸ್ವಿ (ಇಂಗ್ಲೀಷ್), ತೃತೀಯ ಸ್ಥಾನವನ್ನು ಅವಿನಾಶ್ (ಕನ್ನಡ), ಹೆಚ್.ಆರ್ ಹೇಮಾವತಿ (ಕನ್ನಡ), ಅರ್ಪಿತ.ಡಿ.ರೈ (ಇಂಗ್ಲೀಷ್) ಪಡೆದುಕೊಂಡಿದ್ದಾರೆ.

error: Content is protected !!