ಹುದಿಕೇರಿಯಲ್ಲಿ ನೀರು ಸರಬರಾಜು ಯೋಜನೆ ಪ್ರಗತಿ : ಪೈಪ್ ಲೈನ್ ಅಳವಡಿಕೆ ಕಾರ್ಯ ಬಿರುಸು

28/10/2020

ಮಡಿಕೇರಿ ಅ.28 : ಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಾಣಗೊಂಡಿದ್ದು, ಪೈಪ್ ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದೆ.
ಹುದಿಕೇರಿ ಪಟ್ಟಣದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ನೀರು ಸರಬರಾಜಾಗುತ್ತಿತ್ತು. ಇದರಿಂದ ಗ್ರಾ.ಪಂ ಗೆ ಆರ್ಥಿಕ ನಷ್ಟ ಉಂಟಾಗುತ್ತಿತ್ತು. ಅಲ್ಲದೆ ವಿದ್ಯುತ್ ಕಡಿತ ಉಂಟಾದಾಗ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಗ್ರಾ.ಪಂ ಅಧ್ಯಕ್ಷರು, ಸದಸ್ಯರುಗಳು ಈ ಬಗ್ಗೆ ಜಿ.ಪಂ ಸದಸ್ಯೆ ಶ್ರೀಜಾಸಾಜಿ ಅವರನ್ನು ಮನವಿ ಮಾಡಿದ ಹಿನ್ನೆಲೆ ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ಪೈಪ್ ಲೈನ್ ಕಾಮಗಾರಿ ಆರಂಭಿಸಲಾಗಿದೆ.
ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಗ್ರಾ.ಪಂ ಮಾಜಿ ಸದಸ್ಯ ಚಂಗುಲಂಡ ಸೂರಜ್, ಹಿಂದುಳಿದ ವರ್ಗಗಳ ಅಧ್ಯಕ್ಷ ಸಾಜಿ ಅಚ್ಚುತ್ತನ್ ಮತ್ತಿತರರು ಕಾಮಗಾರಿ ಪರಿಶೀಲಿಸಿದರು.