ಗೋಲ್ಡನ್ ಟೆಂಪಲ್‍ಗೆ ಸಧ್ಯಕ್ಕೆ ಪ್ರವಾಸಿಗರು ಬರಬೇಡಿ

28/10/2020

ಮಡಿಕೇರಿ ಅ. 28 : ಕುಶಾಲನಗರ ಸಮೀಪದ ಬೈಲುಕೊಪ್ಪದಲ್ಲಿರುವ ಹೆಸರುವಾಸಿ ಪ್ರವಾಸಿತಾಣ ಗೋಲ್ಡನ್ ಟೆಂಪಲ್‍ಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಕೋವಿಡ್ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸುವ ಸಲುವಾಗಿ ಡಿ.26 ರವರೆಗೆ ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಅವಕಾಶವಿಲ್ಲವೆಂದು ಟಿಬೆಟಿಯನ್ ನಿರಾಶ್ರಿತರ ಶಿಬಿರದ ಆಡಳಿತ ಮಂಡಳಿ ತಿಳಿಸಿದೆ. ಸಧ್ಯಕ್ಕೆ ಪ್ರವಾಸಿಗರು ಬಾರದಂತೆ ಮನವಿ ಮಾಡಿದೆ.

ದೇಶ, ವಿದೇಶಗಳಿಂದ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದ ಕಾರಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.