ಮಡಿಕೇರಿ ಪೊಲೀಸ್ ಠಾಣೆ ಸ್ಥಳಾಂತರಕ್ಕೆ ವಿರೋಧ

October 28, 2020

ಮಡಿಕೇರಿ ಅ. 28 : ನಗರದ ಹೃದಯ ಭಾಗದಲ್ಲಿದ್ದ ನಗರ ಪೊಲೀಸ್ ಠಾಣೆಯನ್ನು ನಗರದಿಂದ ದೂರದ ಪ್ರದೇಶದ ಗ್ರಾಮಾಂತರ ಠಾಣಾ ಕಟ್ಟಡಕ್ಕೆ ಸ್ಥಳಾಂತರಿಸಿರುವ ಬಗ್ಗೆ ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಠಾಣೆಗಳು ನಗರದೊಳಗಿದ್ದಾಗ ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಬರುವುದಲ್ಲದೆ ಪೋಲಿ, ಪುಂಡರ ಹಾವಳಿಯಿಂದ ನಗರ ಸುರಕ್ಷಿತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದುರಸ್ತಿಯ ನೆಪವೊಡ್ಡಿ ಠಾಣೆಗಳನ್ನು ಸ್ಥಳಾಂತರಿಸಿದ್ದು, ದುರಸ್ತಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

error: Content is protected !!