ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶಾತಿ ಆರಂಭ

28/10/2020

ಮಡಿಕೇರಿ ಅ.28 : ಪ್ರಸಕ್ತ ಸಾಲಿಗೆ ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ಸರ್ಕಾರದ ಪ್ರವೇಶಾತಿ ಮಾರ್ಗಸೂಚಿ ಅನ್ವಯ ಪ್ರವೇಶಾತಿ ನಡೆಸಲಾಗುವುದು. ಎಂ.ಕಾಂ., ಎಂಬಿಎ(ಟ್ರಾವೆಲ್ ಮತ್ತು ಟೂರಿಸಂ), ಎಂ.ಎ(ಇಂಗ್ಲೀಷ್), ಎಂ.ಎ(ಅರ್ಥಶಾಸ್ತ್ರ), ಎಂ.ಎಸ್ಸಿ(ಭೌತಶಾಸ್ತ್ರ) ಹಾಗೂ ಸ್ನಾತಕೋತ್ತರ ಯೋಗ ವಿಜ್ಞಾನ ಡಿಪ್ಲೋಮಾ ಕೋರ್ಸುಗಳಿಗೆ ಅರ್ಜಿಯನ್ನು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಆಯಾಯ ವಿಭಾಗಗಳಿಂದ ಪಡೆದುಕೊಂಡು ನವೆಂಬರ್, 16 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಾಲೇಜಿನ ದೂ.ಸಂ.08272-223533/ 8088272689 ಹಾಗೂ ವಿಶ್ವ ವಿದ್ಯಾನಿಲಯದ ಜಾಲತಾಣ(ವೆಬ್‍ಸೈಟ್) www.mangaloreuniversity.ac.in ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.