ನ.15 ರಂದು ಕಾರ್ಯಪ್ಪ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ

28/10/2020

ಮಡಿಕೇರಿ ಅ.28 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದಿಂದ ಇತ್ತೀಚೆಗೆ ಕಾಲೇಜಿನ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಕವನ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಕವನ ಸ್ಪರ್ಧೆಯು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ಮುಂದಾಳತ್ವದಲ್ಲಿ ಆಯೋಜಿಸಲಾಗಿತ್ತು. ಕೋವಿಡ್-19 ಕವನ ಸ್ಪರ್ಧೆಯ ವಿಷಯವಾಗಿತ್ತು.
37 ಅತ್ಯುತ್ತಮ ಕವನಗಳು ಸ್ಪರ್ಧೆಗೆ ಆನ್‍ಲೈನ್ ನಲ್ಲಿ ಬಂದಿದ್ದು ಅದರಲ್ಲಿ 7 ಕವನಗಳಿಗೆ ಬಹುಮಾನ ನೀಡಲು ಆಯ್ಕೆಯಾಗಿವೆ. ಈ ಬಹುಮಾನಗಳನ್ನು ನ.15 ರಂದು ನಡೆಯಲಿರುವ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟದಲ್ಲಿ ನೀಡಲಾಗುವುದು ಎಂದು ಎಫ್‍ಎಂಕೆಎಂಸಿ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.
ಬಹುಮಾನಿತ ವಿದ್ಯಾರ್ಥಿಗಳ ಹೆಸರು: ದಿಲೀಪ್ ಎಲ್.ವೈ (ಪ್ರಥಮ-ಕನ್ನಡ), ರಚನ ಎಸ್.ಎಂ. (ದ್ವಿತೀಯ-ಕನ್ನಡ), ವೇದಶ್ರೀ ಜಿ.ಎಂ.(ದ್ವಿತೀಯ-ಕನ್ನಡ), ಯಶಸ್ವಿ ಸಿ.ಟಿ (ದ್ವಿತೀಯ- ಇಂಗ್ಲೀಷ್), ಅವಿನಾಶ್(ತೃತೀಯ), ಎಚ್.ಆರ್.ಹೇಮಾವತಿ(ತೃತೀಯ), ಅರ್ಪಿತ ಡಿ.ರೈ (ತೃತೀಯ-ಇಂಗ್ಲೀಷ್)