ಪ್ರವಾಸೋದ್ಯಮ ಇಲಾಖೆ ಜಂಟಿ ಆಯುಕ್ತರ ಕೊಡಗು ಭೇಟಿ : ಕಾಮಗಾರಿ ಪರಿಶೀಲನೆ

October 28, 2020

ಮಡಿಕೇರಿ ಅ.28 : ಪ್ರವಾಸೋದ್ಯಮ ಇಲಾಖೆಯ ಜಂಟಿ ಆಯುಕ್ತರಾದ ಜಿ.ಎನ್.ಶ್ವೇತಾ ಅವರು ಬುಧವಾರ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು.
ಜಂಟಿ ಆಯುಕ್ತರಾದ ಜಿ.ಎನ್.ಶ್ವೇತಾ ಅವರು ಜನರಲ್ ತಿಮ್ಮಯ್ಯ ಮ್ಯೂಸಿಯಂ ಪರಿವೀಕ್ಷಣೆ, ಕೂರ್ಗ್ ವಿಲೇಜ್ ಪರಿಶೀಲನೆ, ಶ್ರೀಓಂಕಾರೇಶ್ವರ ದೇವಸ್ಥಾನದ ಬಳಿಯ ಕಾಮಗಾರಿಯ ಮತ್ತು ರಾಜಾಸೀಟು ಬಳಿ ಇಲಾಖೆ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‍ಗಳು ಇತರರು ಹಾಜರಿದ್ದರು.

error: Content is protected !!